ನವದೆಹಲಿ: ಮುಂಬರುವ ತಿಂಗಳಿನಲ್ಲಿ ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ಎನ್ ಎಸ್ ಸಿ(ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ಸ್) ಮತ್ತು ಪಿಪಿಎಫ್ ನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ:ಐಪಿಎಲ್ ಆಡಿದ ಇಂಗ್ಲೆಂಡ್ ಆಟಗಾರರಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನಲ್ಲಿ ಅವಕಾಶವಿಲ್ಲ!
ಕೆಲವು ಮಾಧ್ಯಮಗಳ ವರದಿ ಪ್ರಕಾರ, ಜೂನ್ ತಿಂಗಳ ಕೊನೆಯಲ್ಲಿ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದು, ಒಂದು ವೇಳೆ ಬಡ್ಡಿದರ ಕಡಿತಗೊಳಿಸಿದರೆ ಜುಲೈ 1ರಿಂದ ಇದು ಅನ್ವಯವಾಗಲಿದೆ ಎಂದು ವರದಿ ಹೇಳಿದೆ.
ಈ ಮೊದಲು ಕೇಂದ್ರ ಸರ್ಕಾರ ಏಪ್ರಿಲ್ 1ರಂದು ಸಣ್ಣ ಉಳಿತಾಯ ಯೋಜನೆಯ ಹೆಚ್ಚಿನ ಬಡ್ಡಿದರವನ್ನು ಕಡಿತಗೊಳಿಸಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ. ಆದರೆ ಈ ನಿರ್ಧಾರದ ಬಗ್ಗೆ ಕಟು ಟೀಕೆ ವ್ಯಕ್ತವಾಗಿತ್ತು. ಪಿಪಿಎಫ್, ಎನ್ ಎಸ್ ಸಿಯಂತಹ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರ ಕಡಿತಗೊಳಿಸಿದರೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ ಎಂದು ದೂರಲಾಗಿತ್ತು.
ಪಿಪಿಎಫ್ ಮೇಲಿನ ಬಡ್ಡಿದರವನ್ನು ಶೇ.0.7ರಷ್ಟು, ಎಸ್ ಎಸ್ ಸಿ ಬಡ್ಡಿದರ ಶೇ.09ರಷ್ಟು ಇಳಿಸಿತ್ತು. ಇದರೊಂದಿಗೆ ಪಿಪಿಎಫ್ ಬಡ್ಡಿದರ ಶೇ.6.4ಕ್ಕೆ ಹಾಗೂ ಎನ್ ಎಸ್ ಸಿ ಬಡ್ಡಿದರ ಶೇ.5.9ಕ್ಕೆ ಇಳಿಕೆಯಾಗಿತ್ತು ಎಂದು ವರದಿ ತಿಳಿಸಿದೆ.