Advertisement
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ನನ್ನ ನಿರ್ದೇಶನದ ಎರಡನೇ ಚಿತ್ರವಿದು. ರಾಜ್ ಪ್ರಭು ಅವರಿಂದ ನನಗೆ ಈ ಸಿನಿಮಾದ ಅವಕಾಶ ಸಿಕ್ಕಿತು, ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಈ ಚಿತ್ರದಲ್ಲಿದ್ದು, ವಿಶೇಷ ಪಾತ್ರದಲ್ಲಿ ರಾಜ್ ಪ್ರಭು ಕಾಣಿಸಿ ಕೊಂಡಿದ್ದಾರೆ.
Related Articles
Advertisement
ರಾಜ್ ಪ್ರಭು ಮಾತನಾಡಿ, “ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿಯಾಗಿ ಈ ಕಥೆಯನ್ನು ಮಾಡಿಕೊಂಡಿದ್ದೇವೆ.ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ’ ಎಂದರು.
ಈ ಚಿತ್ರವನ್ನು ವೀರಬಾಹು ಎನ್ನುವವರು ನಿರ್ಮಿಸಿದ್ದಾರೆ. ಕೌಶಿಕ್ ಹರ್ಷ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ವೀರಬಾಹು ಅವರಿಗೆ ಚಿತ್ರದ ಒನ್ ಲೈನ್ ಕೇಳಿ ಇಷ್ಟವಾಗಿ ಸಿನಿಮಾ ನಿರ್ಮಿಸಿದರಂತೆ. ಲಾಂಗ್, ಮಚ್ಚು ಇಲ್ಲದ ನೀಟಾದ ಫ್ಯಾಮಿಲಿ ಡ್ರಾಮಾ ಇದು ಎಂಬುದು ನಿರ್ಮಾಪಕರ ಮಾತು. ಚಿತ್ರದಲ್ಲಿ ಸಚಿನ್ ಪುರೋಹಿತ್, ರವಿ, ಶ್ರೇಯಾ ವಸಂತ್, ಅಕ್ಷಿತ ನಾಗರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.