Advertisement
ಎ. 8ರಂದು ಗೋರೆಗಾಂವ್ ಕರ್ನಾಟಕ ಸಂಘದ ಕಿರು ಸಭಾಗೃಹದಲ್ಲಿ ನಡೆದ ಪೃಥ್ವಿ ಪ್ರಕಾಶನ ಪ್ರಕಟಿತ ಕವಯಿತ್ರಿ, ಲೇಖಕಿ ಸುಜಾತಾ ಶೆಟ್ಟಿ ಅವರ “ಕಾನನದ ಹೂವು’ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.
Related Articles
Advertisement
ಕೃತಿ ಪರಿಚಯಿಸಿದ ಕವಿ ಡಾ| ಜಿ. ಪಿ. ಕುಸುಮಾ ಇವರು, ಒಂದು ನಿರ್ಲಕ್ಷಿತ ಹೂವಿನ ಬದುಕಿನ ಚಿತ್ರಣ ಸುಂದರವಾಗಿ ಕಲಾಕೃತಿಯಲ್ಲಿ ಮೂಡಿಬಂದಿದೆ. ಆ ಹೂವು ಕವಯಿತ್ರಿಗೆ ಕಾನನದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಗೋಚರಿಸುತ್ತಿದೆ. ಯಾರು ಈ ಹೂವನ್ನು ಮುಡಿಗೇರಿಸುತ್ತಾರೆ, ದೇವರಿಗೆ ಯಾವಾಗ ಅದು ಸಮರ್ಪಿತವಾಗುತ್ತದೆ ಎಂಬ ಆಶಾಭಾವನೆ ಅವರ ಕವನದಲ್ಲಿ ಮೂಡಿಬಂದಿದೆ ಎಂದರು.
ಕವಿ, ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಸುಮತಿ ಶೆಟ್ಟಿ ಪ್ರಾರ್ಥನೆಗೈದರು. ಉಮೇಶ್ ಶೆಟ್ಟಿ, ಶರತ್ ಶೆಟ್ಟಿ, ವಸಂತ್ ಶೆಟ್ಟಿ ಇವರು ಅತಿಥಿಗಳನ್ನು ಗೌರವಿಸಿದರು. ಸುಜಾತಾ ಶೆಟ್ಟಿ ಅವರ ಪತಿ ಉಮೇಶ್ ಶೆಟ್ಟಿ, ಪುತ್ರಿ ಪೃಥ್ವಿ ಶೆಟ್ಟಿ ಹಾಗೂ ಸುಜಾತಾ ಶೆಟ್ಟಿ ಅವರ ಕುಟುಂಬಿಕರು, ಹಿತೈಷಿಗಳು ಉಪಸ್ಥಿತರಿದ್ದರು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಎನ್. ಸಿ. ಶೆಟ್ಟಿ ದಂಪತಿ, ದೇವಲ್ಕುಂದ ಭಾಸ್ಕರ ಶೆಟ್ಟಿ, ನಿವೃತ್ತ ಎಸಿಪಿ ಸುಶೀಲಾ ಶೆಟ್ಟಿ, ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯದರ್ಶಿ ನಾರಾಯಣ ಮೆಂಡನ್, ಕವಿ, ಲೇಖಕ ಗೋಪಾಲ್ ತ್ರಾಸಿ, ಎಸ್. ಕೆ. ಸುಂದರ್, ಚಿತ್ರಾಪು ಕೆ. ಎಂ. ಕೋಟ್ಯಾನ್, ರಮೇಶ್ ಶಿವಪುರ, ರಘುನಾಥ ಎನ್. ಶೆಟ್ಟಿ, ಎಸ್. ಎಂ. ಶೆಟ್ಟಿ, ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಕುಂಚ ಕಲಾವಿದ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಣೇಶ್ ಎರ್ಮಾಳ್ ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿ ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಇಂದಿನ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರನ್ನು ಕಂಡಾಗ ಸಂತೋಷವಾಯಿತು. 2015 ರಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ. ನನ್ನೆಲ್ಲ ಊಹೆಗಳು, ಚಿಂತನೆಗಳು, ಸುತ್ತಮುತ್ತಲಲ್ಲಿ ನಡೆದ ಘಟನೆಗಳಿಗೆ ಸ್ಪಂದಿಸಿದಾಗ ಹೃದಯಕ್ಕೆ ತಟ್ಟುವ ಮಾತುಗಳು ಅಕ್ಷರ ರೂಪವಾಗಿ ರೂಪುಗೊಳ್ಳುತ್ತವೆ. ಇವೆಲ್ಲವನ್ನು ಭಾವನಾತ್ಮಕವಾಗಿ ಬರಹಕ್ಕೆ ಇಳಿಸಿದಾಗ ಕವಿ, ಲೇಖಕರಿಂದ ಸಾಹಿತ್ಯ ರೂಪುಗೊಳ್ಳುತ್ತದೆ. ಕೆಲವರಲ್ಲಿ ಕಲೆಯಾಗಿ ಹೊರಹೊಮ್ಮುತ್ತದೆ. ಕೆಲವರಲ್ಲಿ ಮದ, ಮತ್ಸರ, ಮೋಹ, ಮಾಯೆಯ ರೂಪದಲ್ಲಿ ಹೊರ ಬೀಳುತ್ತದೆ. ಇದು ಒಂದು ರೀತಿಯ ಅಭಿವ್ಯಕ್ತಿಯಾಗಿದೆ. ಭಾವನೆಯು ಅಭಿವ್ಯಕ್ತಿಯ ಕಲೆಯಾದರೆ, ಕವನವೂ ಒಂದು ಅದರ ಮಾಧ್ಯಮವಾಗಿದೆ. ನನ್ನ ಮೇಲಿನ ಪ್ರೀತಿಯಿಂದ ಆಗಮಿಸಿದ ಎಲ್ಲರಿಗೂ ಕೃತಜ್ಞತೆಗಳ. – ಸುಜಾತಾ ಶೆಟ್ಟಿ, ಕವಯಿತ್ರಿ