Advertisement

Sirsi ಕಾಲುಸಂಕ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ: ಸತೀಶ್ ಜಾರಕಿಹೊಳಿ ಭರವಸೆ

07:01 PM Aug 17, 2023 | Team Udayavani |

ಶಿರಸಿ: ಕರಾವಳಿ, ಮಲೆನಾಡು ಹಾಗೂ ಇತರೇ ಅವಶ್ಯ ಇರುವ ಕಡೆಗಳಲ್ಲಿ ಸಂಪರ್ಕ ರಹಿತ ಹಳ್ಳಿಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಎಂದು ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

Advertisement

ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ನೇತೃತ್ವದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕ ಕೊರತೆಯಾದ ಕಾಲುಸಂಕಕ್ಕೆ ಹೆಚ್ಚಿನ ಅನುದಾನ ಬಿಡಗಡೆಗೊಳಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಮನವಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದರು.

ಈಗಾಗಲೇ ಸರಕಾರ ಪ್ರಧಾನ ಕಾರ್ಯದರ್ಶಿ ಲೋಕಪಯೋಗಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಕಾಲುಸಂಕಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಜುರುಗಿಸಲಾಗುತ್ತದೆ ಎಂದರು.

ಮನವಿ ನೀಡಿದ ರವೀಂದ್ರ, ಗುಡ್ಡಗಾಡು ಜನರು ಸಂಪರ್ಕದ ಕೊರತೆಯಿಂದ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿರುವುದು ಖೇದಕರ. ಕಾಲುಸಂಕ ಕೊರತೆಯಿಂದ ಗ್ರಾಮೀಣ ಭಾಗದ ಗುಡ್ಡಗಾಡು ಜನರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಸಂಚಾರದ ಸಮಸ್ಯೆಗಳನ್ನ ಏದುರಿಸುತ್ತಿರುವರು. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದಲೇ ರಚಿಸಿಕೊಂಡ ತಾತ್ಕಾಲಿಕ ಕಾಲುಸಂಕದ ಮೇಲಿನ ಓಡಾಟ ಅಪಾಯದಿಂದ ಕೂಡಿದೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರ ಬಂದಿರುವಂತಹ ಹಿನ್ನೆಲೆಯಲ್ಲಿ ಸರಕಾರವು 500 ಕಾಲುಸಂಕಕ್ಕೆ ಮಂಜೂರಿಗೆ ಘೋಷಿಸಿ ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಬೇಕು ಎಂದು ಆಗ್ರಹಿಸಿದರು.

ಹೋರಾಟಗಾರರಾದ ಜಿ ಎಮ್ ಶೆಟ್ಟಿ ಅಂಕೋಲಾ, ಬಾಲಚಂದ್ರ ಶೆಟ್ಟಿ ಅಚಿವೆ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸುನೀಲ್ ನಾಯ್ಕ ಸಂಪಖಂಡ, ಯಲ್ಲಾಪುರ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ನಾಗರಾಜ ಮರಾಠಿ, ದಿನೇಶ್ ನಾಯ್ಕ ಬೇಡ್ಕಣಿ ಮುಂತಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next