Advertisement
ರಾಜ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಬೆಳಗಾವಿ ಜಿಲ್ಲೆಯಲ್ಲಿ ದಾಖಲಾಗಿವೆ. ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದರೆ, ಹಾವೇರಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಒಂದೇ ಒಂದು ಪ್ರಕ ರಣ ಮಾತ್ರ ನಡೆದಿದ್ದು, ಪರಿಹಾರ ಕೂಡ ಕಲ್ಪಿಸಲಾಗಿದೆ. ಬೆಳಗಾವಿಯಲ್ಲಿ 104 ಪ್ರಕರಣಗಳ ಪೈಕಿ 80 ಪ್ರಕರಣ ಗಳಿಗೆ ಪರಿಹಾರ ನೀಡಲಾಗಿದೆ. 17 ಪ್ರಕರಣಗಳು ತಿರಸ್ಕೃತಗೊಂಡಿದ್ದು, 7 ಪ್ರಕರಣಗಳು ಬಾಕಿ ಇವೆ.
Related Articles
Advertisement
ಚಿಕ್ಕಮಗಳೂರು ಜಿಲ್ಲೆಯ 35 ಪ್ರಕರಣಗಳ ಪೈಕಿ 27 ಪ್ರಕರಣಗಳಿಗೆ ಪರಿಹಾರ ನೀಡಿದ್ದು, 8 ಪ್ರಕರಣಗಳು ತಿರಸ್ಕೃತಗೊಂಡಿವೆ. ಶಿವಮೊಗ್ಗ ಜಿಲ್ಲೆಯ 35 ಪ್ರಕರಣಗಳ ಪೈಕಿ 25 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದೆ. 8 ಪ್ರಕರಣಗಳು ತಿರಸ್ಕೃತಗೊಂಡಿದ್ದು, 2 ಪ್ರಕರಣಗಳು ಬಾಕಿ ಇವೆ.
ಕೊಪ್ಪಳ ಜಿಲ್ಲೆಯಲ್ಲಿ 28 ಪ್ರಕರಣಗಳ ಪೈಕಿ 14 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದೆ. 1 ಪ್ರಕರಣ ತಿರಸ್ಕೃತಗೊಂಡಿದ್ದು, 13 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಬಾಗಲಕೋಟೆ ಜಿಲ್ಲೆಯ 28 ಪ್ರಕರಣಗಳ ಪೈಕಿ 24 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದೆ. 4 ಪ್ರಕರಣಗಳು ತಿರಸ್ಕೃತಗೊಂಡಿವೆ. ಬಳ್ಳಾರಿ ಜಿಲ್ಲೆಯ 27 ಪ್ರಕರಣಗಳ ಪೈಕಿ 22 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 4 ಪ್ರಕರಣಗಳು ತಿರಸ್ಕೃತಗೊಂಡಿದ್ದು, ಒಂದು ಪ್ರಕರಣ ಬಾಕಿ ಉಳಿದಿದೆ.
ಗದಗ ಜಿಲ್ಲೆಯಲ್ಲಿ 25 ಪ್ರಕರಗಳ ಪೈಕಿ 16 ಪ್ರಕರಣ ಗಳಿಗೆ ಪರಿಹಾರ ನೀಡಲಾಗಿದೆ. 8 ಪ್ರಕರಣಗಳು ತಿರಸ್ಕೃತ ಗೊಂಡಿದ್ದು, 1 ಪ್ರಕರಣ ಬಾಕಿ ಉಳಿದಿದೆ. ಹಾಸನ ಜಿಲ್ಲೆಯ 23 ಪ್ರಕರಣಗಳ ಪೈಕಿ 10ಕ್ಕೆ ಪರಿಹಾರ ಕಲ್ಪಿಸ ಲಾಗಿದ್ದು, 13 ತಿರಸ್ಕೃತಗೊಂಡಿವೆ. ತುಮಕೂರು ಜಿಲ್ಲೆ ಯಲ್ಲಿ 14 ಪ್ರಕರಣಗಳ ಪೈಕಿ 4 ಅಂಗೀಕೃತಗೊಂಡಿವೆ. 2 ತಿರಸ್ಕೃತಗೊಂಡಿದ್ದು, 8 ಪ್ರಕರಣಗಳಿಗೆ ಪರಿಹಾರ ಕಲ್ಪಿಸಬೇಕಾಗಿದೆ. ರಾಮನಗರ ಜಿಲ್ಲೆಯ 12 ಪ್ರಕರಣಗಳ ಪೈಕಿ 6 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದ್ದು, 3 ತಿರಸ್ಕೃತಗೊಂಡಿವೆ. 3 ಬಾಕಿ ಉಳಿ ಇವೆ. ಉತ್ತರ ಕನ್ನಡ ಜಿಲ್ಲೆಯ 8 ಪ್ರಕರಣಗಳ ಪೈಕಿ 3 ಪ್ರಕರಣಗಳಿಗೆ ಪರಿಹಾರ ನೀಡಲಾಗಿದ್ದು. 5 ತಿರಸ್ಕೃತಗೊಂಡಿವೆ.
ಕೊಡಗು ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿದ್ದು, 4 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 2 ತಿರಸ್ಕೃತಗೊಂಡಿದ್ದು, 1 ಬಾಕಿ ಇದೆ. ಚಿತ್ರದುರ್ಗ ಜಿಲ್ಲೆಯ 7 ಪ್ರಕರಣಗಳ ಪೈಕಿ 5 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 2 ತಿರಸ್ಕೃತಗೊಂಡಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ 5 ಪ್ರಕರಣಗಳ ಪೈಕಿ 5 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 5 ಪ್ರಕರಣಗಳ ಪೈಕಿ 3 ಪ್ರಕರಣಗಳಿಗೆ ಪರಿಹಾರ ನೀಡಲಾಗಿದ್ದು, 2 ತಿರಸ್ಕೃತಗೊಂಡಿವೆ. ಕೋಲಾರ ಜಿಲ್ಲೆಯ 4 ಪ್ರಕರಣಗಳ ಪೈಕಿ 3 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದ್ದು, ಒಂದು ಬಾಕಿ ಇದೆ. ಚಾಮರಾಜನಗರ ಜಿಲ್ಲೆಯ 4 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 4 ಪ್ರಕರಣಗಳ ಪೈಕಿ 3 ಪ್ರಕರಣಕ್ಕೆ ಪರಿಹಾರ ನೀಡಿದ್ದು, ಒಂದು ತಿರಸ್ಕೃತಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಪರಿಹಾರ ಕಲ್ಪಿಸಲಾಗಿದೆ.
2015-16ನೇ ಸಾಲಿನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 263 ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, 225 ಪ್ರಕರಣಗಳು ಇತ್ಯರ್ಥಗೊಂಡಿವೆ. 38 ಪ್ರಕರಣಗಳು ತಿರಸ್ಕೃತಗೊಂಡಿವೆ. ಕೆಲ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಇಳಿಮುಖವಾಗಿವೆ. ರೈತರು ಆತ್ಮಹತ್ಯೆಗೆ ಮುಂದಾಗಬಾರದು. -ಸಿ.ವಿದ್ಯಾನಂದ, ಜಂಟಿ ಕೃಷಿ ಅಧಿಕಾರಿ
-ದುರ್ಯೋಧನ ಹೂಗಾರ