Advertisement

12ನೇ ಮಹಡಿಯಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ

11:44 AM Jun 12, 2018 | Team Udayavani |

ಬೆಂಗಳೂರು: ವೈಟ್‌ಫೀಲ್ಡ್‌ನ ಐಟಿಪಿಎಲ್‌ ಆವರಣದಲ್ಲಿರುವ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಮಧ್ಯಪ್ರದೇಶ ಮೂಲದ ಭವೇಶ್‌ ಜೈಸ್ವಾಲ್‌ (23) ಮೃತನು.

Advertisement

ವೈಟ್‌ಫೀಲ್ಡ್‌ನ ಐಟಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದ ಜೈಸ್ವಾಲ್‌, ಒಂದು ವರ್ಷದ ಹಿಂದೆ ಮಧ್ಯಪ್ರದೇಶದಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಶೌಚಾಲಯದ ಬಳಿ ಹೋಗಿದ್ದ ಜೈಸ್ವಾಲ್‌, ಕಿಟಕಿ ಗಾಜು ಒಡೆದು ಕೆಳಕ್ಕೆ ಜಿಗಿದಿದ್ದಾನೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಜೈಸ್ವಾಲ್‌ ಮೃತಪಟ್ಟಿದ್ದ.

ನಂತರ ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್‌ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಧ್ಯಪ್ರದೇಶದಲ್ಲಿರುವ ಜೈಸ್ವಾಲ್‌ ಪೋಷಕರಿಗೆ ವಿಚಾರ ತಿಳಿಸಿದ್ದು, ತನಿಖೆ ಬಳಿಕ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next