Advertisement

ಬಗ್ಧಾದ್‌ ವಿದ್ಯುತ್‌ ಘಟಕದ ಮೇಲೆ ಉಗ್ರರ ದಾಳಿ: 7 ಸಾವು

03:24 PM Sep 02, 2017 | Team Udayavani |

ಸಮಾರ್ರಾ, ಬಗ್ಧಾದ್‌ : ಉತ್ತರ ಬಗ್ಧಾದ್‌ನ ಸಮಾರ್ರಾ ಎಂಬಲ್ಲಿರುವ ಉಷ್ಣ ವಿದ್ಯುತ್‌ ಸ್ಥಾವರದ ಮೇಲೆ ದಾಳಿ ಮಾಡಲೆತ್ನಿಸಿದ ಆತ್ಮಾಹುತಿ ಬಾಂಬರ್‌ಗಳನ್ನು ತಮ್ಮನ್ನು ತಾವು ಸ್ಫೋಟಿಸಿಕೊಂಡ ಕಾರಣ ಏಳು ಜನರು ಮೃತಪಟ್ಟು 12 ಮಂದಿ ಗಾಯಗೊಂಡಿರುವುದಾಗಿ ಇರಾಕ್‌ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಬಗ್ಧಾದ್‌ನಿಂದ ಸುಮಾರು 100 ಕಿ.ಮೀ. ಉತ್ತರಕ್ಕಿರುವ ಸಮಾರ್ರಾದಲ್ಲಿನ ಉಷ್ಣ ವಿದ್ಯುತ್‌ ಘಟಕದ ಮೇಲೆ ದಾಳಿ ನಡೆಸಲು ಮೂವರು ಉಗ್ರರು ಗ್ರೆನೇಡ್‌ ಹಾಗೂ ಸ್ಫೋಟಕ ಪಟ್ಟಿಗಳನ್ನು ಕಟ್ಟಿಕೊಂಡು ಸಂಪೂರ್ಣ ಸನ್ನದ್ದರಾಗಿ ಬಂದಿದ್ದರು.

ಇವರು ಘಟಕವನ್ನು ಪ್ರವೇಶಿಸಿದೊಡನೆಯೇ ಅಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಕಾರ್ಮಿಕರನ್ನು ಗುಂಡಿಕ್ಕಿ ಕೊಂದು 12 ಮಂದಿಯನ್ನು ಗಾಯಗೊಳಿಸಿದರು ಎಂದು ಅಧಿಕಾರಿಯೋರ್ವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next