Advertisement

ಸಿರಿಯದ ಅಲ್‌ ಬಾಬ್‌ ಪಟ್ಟಣದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 42 ಬಲಿ

04:13 PM Feb 24, 2017 | udayavani editorial |

ಬೇರೂತ್‌: ಸಿರಿಯದ ಅಲ್‌ ಬಾಬ್‌ ಪಟ್ಟಣದ ಹೊರ ಭಾಗದಲ್ಲಿ ಟರ್ಕಿ ಬೆಂಬಲಿತ ಬಂಡುಕೋರರ ಮೇಲೆ ಆತ್ಮಾಹುತಿ ಬಾಂಬರ್‌ ಓರ್ವ ನಡೆಸಿದ ಬಾಂಬ್‌ ದಾಳಿಗೆ 42 ಮಂದಿ ಬಲಿಯಾದರು. ಇದಕ್ಕೆ ಕೆಲವೇ ತಾಸು ಮುನ್ನ ಬಂಡುಕೋರರು ತಾವು ಅಲ್‌ ಬಾಬ್‌ ಪಟ್ಟಣವನ್ನು ಇಸ್ಲಾಮಿಕ್‌ ಉಗ್ರರಿಂದ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. 

Advertisement

ಅಲ್‌ ಬಾಬ್‌ ಪಟ್ಟಣದಿಂದ ಕೇವಲ ಎಂಟು ಕಿ.ಮೀ. ಈಶಾನ್ಯದಲ್ಲಿರುವ ಸೂಸಿಯಾನ್‌ ಗ್ರಾಮದಲ್ಲಿನ ಬಂಡುಕೋರರ ಕಮಾಂಡ್‌ ಸೆಂಟರ್‌ ಹೊರಭಾಗದಲ್ಲಿ ಆತ್ಮಾಹುತಿ ಬಾಂಬರ್‌, ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಸ್ಫೋಟಿಸಿ 42 ಮಂದಿಯನ್ನು ಬಲಿಪಡೆದ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ಹೇಳಿದೆ. 

ಆತ್ಮಾಹುತಿ ಬಾಂಬರ್‌ನ ಈ ದಾಳಿಯಲ್ಲಿ ಎರಡು ಕಮಾಂಡ್‌ ಪೋಸ್ಟ್‌ಗಳು ನಾಶವಾಗಿವೆ ಮತ್ತು ಭಾರೀ ಸಂಖ್ಯೆಯ ಹೋರಾಟಗಾರರನ್ನು ಗಂಭೀರವಾಗಿ ಗಾಯಗೊಳಿಸಿದೆ. ಮೃತರಲ್ಲಿ ಹೆಚ್ಚಿನವರು ಹೋರಾಟಗಾರರಾಗಿದ್ದಾರೆ. 

ತತ್‌ಕ್ಷಣಕ್ಕೆ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತಿಲ್ಲ; ಆದರೆ ದಾಳಿಯ ವೈಖರಿಯನ್ನು ನೋಡಿದಾಗ ಇದು ಐಸಿಸ್‌ ಉಗ್ರ ಸಂಘಟನೆಯದ್ದೇ ಕೃತ್ಯವೆನ್ನುವುದು ಸ್ಪಷ್ಟವಿದೆ ಎಂದು ಬ್ರಿಟನ್‌ ಮೂಲದ ವಿಚಕ್ಷಣ ಸಮೂಹ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next