Advertisement

ಸೂಸೈಡ್‌ ಬಾಂಬ್‌ ಹಾಕಿದ ನಾಗರಾಜ್‌

12:15 PM Apr 07, 2018 | |

ಬೆಂಗಳೂರು: ಬ್ಲಾಕ್‌ ಆಂಡ್‌ ವೈಟ್‌ ದಂಧೆ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲಿರುವ ಪಾಲಿಕೆಯ ಮಾಜಿ ಸದಸ್ಯ ವಿ.ನಾಗರಾಜ್‌, ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡ ನಾಗರಾಜ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ನಾಗರಾಜ್‌ ಚಿಕಿತ್ಸೆ ಪಡೆಯುತ್ತಿದ್ದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ  ಈ ಸಂಬಂಧ ದೂರು ದಾಖಲಾಗಿದೆ.

ಆಗಿದ್ದೇನು?: ಶನಿವಾರ ಸುದ್ದಿಗೋಷ್ಠಿ ಕರೆದಿದ್ದ ನಾಗರಾಜ್‌, ದಿನೇಶ್‌ ಗುಂಡೂರಾವ್‌ ಹಾಗೂ ಮತ್ತು ಸಚಿವ ಕೆ.ಜೆ.ಜಾರ್ಜ್‌ ಸೇರಿ ನಾನು ಚುನಾವಣೆಗೆ ನಿಲ್ಲದಂತೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ಮತ್ತು ಬೆಂಬಲಿಗರನ್ನು ಬಿಟ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಜೇಬಿನಲ್ಲಿರಿಸಿಕೊಂಡಿದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು.

ಇದರಿಂದ ಕೆಲಕಾಲ ಕೆಲಕಾಲ ಆತಂಕ ಉಂಟಾಗಿತ್ತು. ಕೂಡಲೇ ಸ್ಥಳದಲ್ಲಿದ್ದª ನಾಗರಾಜ್‌ ಬೆಂಬಲಿಗರು ಕೀಟನಾಶಕದ ಬಾಟಲಿಗಳನ್ನು ಕಿತ್ತುಕೊಂಡು, ಅಸ್ವಸ್ಥರಾಗಿ ಒದ್ದಾಡುತ್ತಿದ್ದ ನಾಗರಾಜ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ಇದಕ್ಕೂ ಮೊದಲು ನಾಗರಾಜ್‌, ನಾನು ಸ್ಟೇಟ್‌ ನ್ಯೂಸ್‌ ಆಗ್ತೀನೆ ಅಂತ ಪದೇ ಪದೇ ಹೇಳುತ್ತಿದ್ದರು.

ನನಗೆ ಮತ್ತು ನನ್ನ ಕುಟುಂಬಕ್ಕೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ.  ನನ್ನ ಮಕ್ಕಳಾದ ಗಾಂಧಿ ಮತ್ತು ಶಾಸಿ ಮೇಲೆ ಸುಳ್ಳು ಕೇಸು ಹಾಕಿ ರೌಡಿ ಶೀಟರ್‌ ಪಟ್ಟ ನೀಡಿದ್ದಾರೆ ಎಂದು ದೂರಿದರು. ಜೈಲಿನಿಂದ ಹೊರಗೆ ಬಂದ ಮೇಲೆ  ಪತ್ರಿಕಾಗೋಷ್ಠಿ ಕರೆಯಲು ಪ್ರಯತ್ನಿಸಿದೆ.

Advertisement

ಆದರೆ ಪೊಲೀಸರು ಮತ್ತು ರಾಜಕೀಯ ಮುಖಂಡರು ಇದಕ್ಕೆ ಅವಕಾಶ ನೀಡಲಿಲ್ಲ. ರಾಜ್ಯ ಬಿಟ್ಟು ಹೋಗುವಂತೆ ತಾಕೀತು ಮಾಡಿದರು. ಎಲ್ಲಾ ಆಸ್ತಿಗಳನ್ನು 20 ಪರ್ಸೆಂಟ್‌ಗೆ ಮಾರಿ ಬಿಡಿ ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನಗರದಲ್ಲಿ ಅಕ್ರಮ ವಿಡಿಯೋ ಗೇಮ್‌ ದಂಧೆಗೆ ಸಚಿವರ ಪುತ್ರನ ಕುಮ್ಮಕ್ಕು ಇದೆ ಎಂದು ದೂರಿದರು.

ಪ್ರಕರಣ ದಾಖಲು: ಪ್ರಸ್‌ಕ್ಲಬ್‌ನಲ್ಲಿ ನಾಗರಾಜ್‌ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು “ಆತ್ಮಹತ್ಯೆ ಯತ್ನ’ ಪ್ರಕರಣ ದಾಖಲಾಗಿದೆ.

ಪಾಲಿಕೆಯ ಮಾಜಿ ಸದಸ್ಯ ನಾಗರಾಜ್‌ಗೆ ನಾನಾಗಲಿ ಅಥವಾ ನನ್ನ ಆಪ್ತರಾಗಲಿ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ನಾವ್ಯಾರೂ ಅವನ ತಂಟೆಗೇ ಹೋಗಿಲ್ಲ. ನಾಗರಾಜ್‌ ಅನಗತ್ಯವಾಗಿ ನನ್ನ ಹಾಗೂ ಸಚಿವ ಕೆ.ಜೆ. ಜಾರ್ಜ್‌ ಹೆಸರು ಹೇಳಿದ್ದಾರೆ. ಈ ಬಗ್ಗೆ ಪೊಲಿಸ್‌ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next