ಮೈಸೂರು: ಸರ್ಕಾರದ ಯೋಜನೆಯೊಂದರ ಸಾಲ ಸೌಲಭ್ಯ ಕೊಡಿಸುವುದಾಗಿ ಕಮಿಷನ್ ವಸೂಲಿ ಮಾಡಿದ್ದ ವ್ಯಕ್ತಿಯೊಬ್ಬ, ಸಾಲ ಕೊಡಿಸಲು ಸಾಧ್ಯವಾಗದೇ ಹೆದರಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ.
ಮಂಡಿ ಮೊಹಲ್ಲಾ ನಿವಾಸಿ ರಾಧಾಕೃಷ್ಣ (55) ಎಂಬುವರೇ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡ ವ್ಯಕ್ತಿ. ಮಂಗಳವಾರ ಬೆಳಗ್ಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಉದ್ಯಾನವನದ ಆವರಣದಲ್ಲಿ ಈ ಘಟನೆ ಜರುಗಿದೆ.
ಸಾಲಕೊಡಿಸಲು ಆಗಿರಲಿಲ್ಲ : ರಾಧಾಕೃಷ್ಣ ಸೇರಿ 4-5 ಮಂದಿ, ಕೆಲ ಸಾರ್ವಜನಿಕರಿಗೆ ರೋಜ್‌ಗಾರ್ ಯೋಜ ನೆ ಯಡಿ ಬ್ಯಾಂಕಿ ನಿಂದ ಸಾಲ ಕೊಡಿಸು ವುದಾಗಿ ಕಮಿಷನ್ ಪಡೆದಿದ್ದರು. 10 ಲಕ್ಷಕ್ಕೆ ಒಂದು ಲಕ್ಷ ರೂ. 5 ಲಕ್ಷಕ್ಕೆ 50 ಸಾವಿರ ನಂತೆ ಕಮಿಷನ್ ನಿಗದಿ ಮಾಡಿ ದ್ದರು. ಸಾಕಷ್ಟು ಮಂದಿ ಯಿಂದ 30 ರಿಂದ 15 ಸಾವಿರ ರೂ.ವರೆಗೆ ಹಣ ನಿಗದಿ ಮಾಡಿ ದ್ದರು. ಆದರೆ, ಕಳೆದ 1 ವರ್ಷದಲ್ಲಿ ಯಾರಿಗೂ ಸಾಲ ಕೊಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಮಿಷನ್ ಕೊಟ್ಟವರು, ಹಣ ವಾಪಸ್ ನೀಡುವಂತೆ ದುಂಬಾಲು ಬಿದ್ದಿ ದ್ದಾರೆ.
ಇದರಿಂದ ಕಂಗಾ ಲಾದ ರಾಧಾಕೃಷ್ಣ, ಎಲ್ಲರನ್ನು ಜಿಲ್ಲಾಧಿ ಕಾರಿ ಕಚೇರಿ ಬಳಿ ಬರುವಂತೆ ಹೇಳಿದ್ದಾರೆ. ಈ ಮಧ್ಯೆ ರಾಧಾಕೃಷ್ಣ ಎಂಬುವರು ಬರುವಾಗ ಶೂನಲ್ಲಿ ಚಾಕು ಇರಿಸಿ ಕೊಂಡು ಬಂದಿ ದ್ದಾರೆ. ಡೀಸಿ ಕಚೇರಿ ಬಳಿಯ ಉದ್ಯಾನಕ್ಕೆ ಬಂದ ಕಮಿಷನ್ ಹಣ ಕೊಟ್ಟವರು, ಸಾಲ ಕೊಡಿಸಿ, ಇಲ್ಲದಿದ್ದರೆ ಕೊಟ್ಟಿ ರುವ ವಾಪಸ್ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಸತೀಶ ಎಂಬಾತ ರಾಧಾಕೃಷ್ಣ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ತೆರಳಿದ್ದಾನೆ. ಮೂತ್ರ ವಿಸರ್ಜನೆಗೆ ತೆರಳುವುದಾಗಿ ಉದ್ಯಾನದ ಬೇಲಿ ಬಳಿ ಬಂದ ರಾಧಾಕೃಷ್ಣ, ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ : ರೈತರ ಹೆಸರಿನಲ್ಲಿ ಎಡಪಂಥೀಯ ದಲ್ಲಾಳಿಗಳ ಪ್ರತಿಭಟನೆ: ನಳಿನ್‍ಕುಮಾರ್ ಕಟೀಲ್
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ರಾಧಾಕೃಷ್ಣ ವಿರುದ್ಧ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.