Advertisement

ಸಿರಿಯದ ಹೋಮ್ಸ್‌ ನಗರದಲ್ಲಿ ಆತ್ಮಾಹತಿ ಬಾಂಬ್‌ ದಾಳಿ: 42 ಬಲಿ

03:28 PM Feb 25, 2017 | Team Udayavani |

ಬೇರೂತ್‌ : ಸಿರಿಯಾ ಸರಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ನಲ್ಲಿನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ ಇಂದು ಶನಿವಾರ ನಡೆದಿರುವ ಭೀಕರ ಆತ್ಮಾಹುತಿ ಬಾಂಬ್‌ ದಾಳಿಗೆ 42 ಜನರು ಬಲಿಯಾಗಿದ್ದಾರೆ.

Advertisement

ಈ ಹೊಸ ಬಾಂಬ್‌ ದಾಳಿಯು ಇದೀಗ ಜಿನೇವಾದಲ್ಲಿ ನಡೆಯಲಿರುವ ಶಾಂತಿ ಮಾತುಕತೆಯ ಕರಿನೆರಳನ್ನು ಚೆಲ್ಲಿದೆ ಎಂದು ಸರಕಾರಿ ಒಡೆತನದ ಟಿವಿ ವಿಶ್ಲೇಷಕರು ಮತ್ತು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಸರಕಾರಿ ಭದ್ರತಾ ಮತ್ತು ಮಿಲಿಟರಿ ಗುಪ್ತಚರ ದಳದ ಪ್ರಧಾನ ಕಾರ್ಯಾಲಯಕ್ಕೆ ಸಮೀಪ ಕನಿಷ್ಠ ಆರು ಬಾಂಬ್‌ ದಾಳಿಗಳು ನಡೆದಿವೆ. ಇವುಗಳಲ್ಲಿ ಆನೇಕ ಆತ್ಮಾಹುತಿ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಅಮಾಯಕರನ್ನು ಬಲಿಪಡೆದಿದ್ದಾರೆ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಕೇಂದ್ರ ನಿರ್ದೇಶಕ ರಮೀ ಅಬ್ಧೆಲ್‌ ರೆಹಮಾನ್‌ ಹೇಳಿದ್ದಾರೆ. 

ಈ ದಾಳಿಗಳನ್ನು ಅನುಸರಿಸಿ ಭದ್ರತಾ ಪಡೆಗಳು ನಗರ ಕೇಂದ್ರವನ್ನು ಮುಚ್ಚಿದ್ದಾರೆ. 2014ರ ಮೇ ತಿಂಗಳಲ್ಲಿ  ಬಂಡುಕೋರರು ತಾವೇ ಕದನ ವಿರಾಮ ಘೋಷಿಸಿ ನಿರ್ಗಮಿಸಿದ ಬಳಿಕ ಹೋಮ್ಸ್‌ ಪಟ್ಟಣವು ಸಂಪೂರ್ಣವಾಗಿ ಸಿರಿಯ ಸರಕಾರದ ವಶದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next