Advertisement

ಸೂಗೂರೇಶ್ವರ ಸ್ವಾಮಿಜೋಡು ರಥೋತ್ಸವ

02:22 PM Dec 14, 2018 | |

ರಾಯಚೂರು: ತಾಲೂಕಿನ ದೇವಸೂಗೂರಿನಲ್ಲಿ ಶ್ರೀ ಸೂಗೂರೇಶ್ವರ ಸ್ವಾಮಿ ಜೋಡು ರಥೋತ್ಸವವು ಗುರುವಾರ ಸಂಜೆ ಲಕ್ಷಾಂತರ ಭಕ್ತರ ಹರ್ಷೋದ್ಘಾರಗಳೊಂದಿಗೆ, ಸಕಲ ವಾದ್ಯವೈಭವದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

Advertisement

ಶ್ರೀ ಸೂಗೂರೇಶ್ವರ ಸ್ವಾಮಿ ಜಂಗಮನೂ ಹೌದು, ವೀರಭದ್ರನ ಅವತಾರವೂ ಹೌದು ಎನ್ನುವ ಕಾರಣಕ್ಕೆ ಇಲ್ಲಿ ಎರಡು ರಥಗಳನ್ನು ಎಳೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಭಾಗದಲ್ಲಿ ಎಲ್ಲಿಯೂ ಜೋಡು ರಥೋತ್ಸವ ಎಳೆಯುವ ನಿದರ್ಶನ ಇಲ್ಲ. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲದೇ, ತೆಲಂಗಾಣ, ಸೀಮಾಂಧ್ರ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸ್ವಾಮಿ ವೈಭವ ಕಣ್ತುಂಬಿಕೊಂಡರು.

ಜಾತ್ರೆ ನಿಮಿತ್ತ ಬೆಳಗ್ಗೆ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಸ್ವಾಮಿಗೆ ಚಿನ್ನಾಭರಣಗಳಿಂದ ವಿಶೇಷ ಅಲಂಕಾರ ಸೇವೆ ಮಾಡಲಾಯಿತು. ಸಂಜೆ ಸಕಲ ವಾದ್ಯ ಮೇಳಗಳೊಂದಿಗೆ ಸ್ವಾಮಿಯ ಜೋಡು ರಥೋತ್ಸವ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next