Advertisement

ಎಲ್ಲಾ ವಾಹನಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಿ

03:47 PM Oct 09, 2021 | Team Udayavani |

ಚಿಕ್ಕಬಳ್ಳಾಪುರ: ವೈಯಕ್ತಿಕ, ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ಎಲ್ಲಾ ವಾಹನಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಲಕ್ಷ್ಮೀಕಾಂತ್‌ ಜಾನಕಿ ಮಿಸ್ಕಿನ್‌ ತಿಳಿಸಿದರು.

Advertisement

ನಗರದ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆಯು 1988ರ ಮೋಟಾರು ವಾಹನಗಳ ಕಾಯ್ದೆ ಮತ್ತು ಗ್ರಾಹಕರ ಕಾನೂನು ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಚಾರ ನಿಯಮ ಪಾಲಿಸಿ: ವಾಹನ ವಿಮೆ ಮಾಡಿಸಿಕೊಂಡಿಲ್ಲದ ಕೆಲವು ಮಾಲಿಕರು, ಅಪಘಾತ ಸಂಭವಿಸಿದಾಗ ತಮ್ಮ ಆಸ್ತಿ, ಮನೆ, ಸಂಪತ್ತನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಮೋಟಾರು ವಾಹನಗಳ ಕಾಯ್ದೆಯು ನಿಗದಿಪಡಿಸಿರುವ ಸಂಚಾರ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಅಗತ್ಯ ವಾಹನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ;- ಗಡಿಕೇಶ್ವರ ಗ್ರಾಮದಲ್ಲಿ 6 ವರ್ಷಗಳಿಂದ ಕಂಪಿಸುತ್ತಿದೆ ಭೂಮಿ: ಗ್ರಾಮಸ್ಥರಲ್ಲಿ ಹೆಚ್ಚಾದ‌ ಆತಂಕ

ಕುಟುಂಬದವರ ನೆನಪಿರಲಿ: ಸಾರ್ವಜನಿಕರ ಉದ್ದೇಶಕ್ಕೆ ಬಳಸುವ ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆಸನಗಳನ್ನು ಭರ್ತಿಮಾಡಬೇಕು, ಅತ್ಯಧಿಕ ತೂಕವನ್ನು ಹಾಕಬಾರದು, ಪರವಾನಗಿ ಹೊಂದಿರಬೇಕು, ಅಂತಹ ವಾಹನಗಳ ಚಾಲಕರು ಬ್ಯಾಡ್ಜ್ ಒಳಗೊಂಡ ಸಮವಸ್ತ್ರವನ್ನು ಧರಿಸಬೇಕು, ಚಾಲನಾ ಅವಧಿಯಲ್ಲಿ ಮೊಬೈಲ್‌ ಬಳಸುವಂತಹದ್ದು, ಶಿಕ್ಷಾರ್ಹ ಅಪರಾಧವಾಗಿದೆ.

Advertisement

ಮೋಟಾರ್‌ ವಾಹನ ಕಾಯ್ದೆ, ಸಂಚಾರ ನಿಯಮಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬದ ಸದಸ್ಯರು ನಿಮ್ಮನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ ಎಂಬುದನ್ನು ಅರಿತು ಜ್ಞಾನ ಭರಿತವಾಗಿ ಚಾಲಕರು ಚಾಲನೆ ಮಾಡಬೇಕು ಎಂದು ವಿವರಿಸಿದರು. 4 ಸಾವಿರ ರೂ.ವರೆಗೂ ದಂಡ: ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಂಜುನಾಥ್‌ ಮಾತನಾಡಿ, 15 ವರ್ಷ ಮೇಲ್ಪಟ್ಟ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯಲು ಹಾಗೂ ಅಂತಹ ವಾಹನಗಳನ್ನು ನಿರುಪಯುಕ್ತಗೊಳಿಸಲು ಸರ್ಕಾರ ನಿಯಮಗಳನ್ನು ರೂಪಿಸುತ್ತಿದೆ.

ಈಗಾಗಲೇ ಸರ್ಕಾರ ನೀಡಿರುವ ನಿರ್ದೇಶನಗಳನ್ವಯ ಅನಧೀಕೃತವಾಗಿ ರಸ್ತೆಗೆ ಇಳಿದ ದ್ವಿಚಕ್ರ, ಆಟೋಗಳಿಗೆ 2 ಸಾವಿರ ಹಾಗೂ ಕಾರು ಮತ್ತು ಬಸ್‌ಗಳಿಗೆ 4 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದರು. ಪ್ಯಾನಲ್‌ ವಕೀಲ ಪಿ.ಎ.ಬಾಬು ಫಕ್ರುದ್ದೀನ್‌, ಸಾರಿಗೆ ಅಧಿಕಾರಿ ಡಿ.ವಿ.ನಾಗರಾಜ, ವಿವಿಧ ವಾಹನಗಳ ಚಾಲಕರು, ಸವಾರರು, ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next