Advertisement

ಪಾಲಿಕೆ ಬಜೆಟ್‌ಗೆ ಸಚಿವರು, ಶಾಸಕರ ಸಲಹೆ

03:34 PM Mar 18, 2022 | Team Udayavani |

ಬೆಂಗಳೂರು: ಈ ಸಾಲಿನ ಬಜೆಟ್‌ಗೆ ಪಾಲಿಕೆ ಸಜ್ಜಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಗುರುವಾರ ಬೆಂಗಳೂರು ವ್ಯಾಪ್ತಿಯ ಶಾಸಕರ, ಪರಿಷತ್‌ ಸದಸ್ಯರ ಮತ್ತು ಸಚಿವರ ಜತೆ ಸಭೆ ನಡೆಸಿದರು.

Advertisement

ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆ.ಗೋಪಾಲಯ್ಯ, ಮುನಿರತ್ನ, ಸಂಸದ ಪಿ.ಸಿ. ಮೋಹನ್‌, ಶಾಸಕ ಸುರೇಶ್‌ ಕುಮಾರ್‌, ರಘು, ಎನ್‌.ಎ.ಹ್ಯಾರೀಸ್‌, ಆರ್‌.ಮಂಜುನಾಥ್‌, ಕೆ.ಜೆ.ಜಾರ್ಜ್‌, ಸತೀಶ್‌ ರೆಡ್ಡಿ, ಭೈರತಿ ಸುರೇಶ್‌, ರವಿ ಸುಬ್ರಮಣ್ಯ, ಸೌಮ್ಯಾ ರೆಡ್ಡಿ, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಯು.ಬಿ.ವೆಂಕಟೇಶ್‌, ಅ.ದೇವೇಗೌಡ ಮತ್ತತಿರರು ಭಾಗವಹಿಸಿದ್ದರು.

ವಾರ್ಡ್‌ಗಳಲ್ಲಿ ಉಂಟಾಗುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ಗೂ 2 ರಿಂದ 3 ಕೋಟಿ ರೂ. ವಾರ್ಷಿಕ ನಿರ್ವಹಣೆಗೆ ಅನುದಾನ ಮೀಸಲಿಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಶಾಸಕರ ವ್ಯಕ್ತಪಡಿಸಿ ದರು. ಬಿ ಯಿಂದ ಎ ಖಾತಾ ವರ್ಗೀಕರಣ ಮಾಡಿ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಿಸುವುದು. ತೆರಿಗೆ ವ್ಯಾಪ್ತಿಗೆ ಒಳಪಡದ ಸುಮಾರು 5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದು. ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಪ್ರಕ್ರಿಯೆಗೆ ಚುರುಕು ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು ಮತ್ತತಿರರ ಸಲಹೆಗಳನ್ನು ನೀಡಿದರು.

ರಾಜಕಾಲುವೆಗಳ ನಿರ್ವಹಣೆ ಒಂಟಿ ಮನೆಗಳಿಗೆ ಅನುದಾನ ಮೀಸಲಿಡುವುದು. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವುದು. ಕೆರೆಗಳನ್ನು ಅಭಿವೃದ್ಧಿಗೊಳಿಸಿ ಸರಿಯಾಗಿ ನಿರ್ವಹಣೆ ಮಾಡುವುದು ಹಾಗೂ ಕಲ್ಯಾಣ ಕಾರ್ಯಕ್ರಮದಡಿ ಬಡ ವರ್ಗದ ಜನರಿಗೆ ಲ್ಯಾಪ್‌ಟಾಪ್‌ ವಿತರಿಸುವುದು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಸುಸ್ಥಿರ ಆರ್ಥಿಕ ಪರಿಸ್ಥಿತಿಗೆ ಕ್ರಮ: ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುವುದು ಹಾಗೂ ಸುಸ್ಥಿರ ಆರ್ಥಿಕ ಪರಿಸ್ಥಿತಿಯೊಂದಿಗೆ ಮುನ್ನಡೆಸಲು ಕ್ರಮವಹಿಸಬೇಕಿದೆ. ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಹರಿಸಬೇಕಿದ್ದು, ನಾಗರಿಕರಿಗೆ ಅವಶ್ಯಕ ಮೂಲ ಭೂತ ಸೌಕರ್ಯಗಳನ್ನು ಒದಗಿಸುವುದು ಪಾಲಿಕೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಗೆ ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡಿಸಲು ಸಚಿವರ ಮತ್ತು ಶಾಸಕರ ಸಲಹೆ ಪಡೆಯಲಾಯಿತು ಎಂದರು.

Advertisement

ಆದಾಯ ಮೂಲ ಹೆಚ್ಚಿಸಲು ಆಸ್ತಿ ತೆರಿಗೆ: ಪಾಲಿಕೆ ವ್ಯಾಪ್ತಿಯಲ್ಲಿ ಆದಾಯದ ಮೂಲವನ್ನು ಹೆಚ್ಚಿಸುವ ಸಲುವಾಗಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ನಗರದಲ್ಲಿನ ಬೀದಿ ದೀಪ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಬದಲಾಯಿಸುವ ಕೆಲಸಕ್ಕೆ ವೇಗ ನೀಡಲಾಗುತ್ತಿದ್ದು, ಎಲ್ಲೆಲ್ಲಿ ಬೀದಿ ದೀಪ ಅಳವಡಿಸಿಲ್ಲ ಅಂತಹ ಜಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next