Advertisement

ಬಿಡಿಎ ಕಾಯ್ದೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ

05:37 AM May 15, 2020 | Lakshmi GovindaRaj |

ಬೆಂಗಳೂರು: ಬಿಡಿಎ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮನೆ ನಿರ್ಮಾಣ ಸಕ್ರಮಗೊಳಿಸುವ ಸಲುವಾಗಿ ಬಿಡಿಎ ಕಾಯ್ದೆ ತಿದ್ದುಪಡಿ ಹಾಗೂ ಬಿಲ್ಡರ್‌ಗಳ ನೆರವಿಗಾಗಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ  ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಬಿಡಿಎ ವ್ಯಾಪ್ತಿಯ ಅಕ್ರಮ ಸಕ್ರಮಕ್ಕೆ ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಕಾಯ್ದೆಗೆ  ತಿದ್ದು ಪಡಿ ಅವಶ್ಯಕವಾಗಿತ್ತು.

Advertisement

ಅದೇ ರೀತಿ ಬಿಲ್ಡರ್‌ಗಳು ಪೂರ್ಣ ಪ್ರಮಾಣದಲ್ಲಿ ಮುಗಿಸದ ಲೇಔಟ್‌  ಗಳಲ್ಲಿನ ನಿವೇಶನ ಮಾರಾಟ ಮಾಡಲು ಸಾಧ್ಯವಾಗದೇ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವುದಾಗಿ ಮನವಿ ಸಲ್ಲಿಸಿ ದ್ದರಿಂದ  ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬಿಡಿಎ ಭೂ ಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ (12ವರ್ಷಗಳ ಹಿಂದೆ ನಿರ್ಮಿಸಿರುವ ಷರತ್ತು) ವಾಸದ ಮನೆ  ಸಕ್ರಮಗೊಳಿಸಲು ಅವಕಾಶ ಸಿಗಲಿದೆ.  0x30, 30×40, 40×60 ಹಾಗೂ 50×80 ಅಳತೆಯ ನಿವೇಶಗಳಲ್ಲಿ ಕಟ್ಟಿರುವ  ಮನೆಗಳಿಗಷ್ಟೇ ಇದು ಅನ್ವಯ.

ಖಾಲಿ ನಿವೇಶನಕ್ಕೆ ಅನ್ವಯವಾಗದು ಎಂದು ಕಾನೂನು ಮತ್ತು ಸಂಸದೀಯ  ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ, 20×30 ಅಳತೆಯ ನಿವೇಶನಕ್ಕೆ ಮಾರ್ಗಸೂಚಿ ದರದ ಶೇ.10, 30×40 ನಿವೇಶನಕ್ಕೆ ಮಾರ್ಗಸೂಚಿ ದರದ ಶೇ.20, 40×60 ಹಾಗೂ 50×80 ಅಳತೆಯ ನಿವೇಶನಕ್ಕೆ ಮಾರ್ಗಸೂಚಿ  ದರದ ಶೇ.40 ರಷ್ಟು ಶುಲ್ಕ ಪಡೆದು ಸಕ್ರಮಗೊಳಿಸಲಾಗುವುದು. ನಗರದಲ್ಲಿ ಒಟ್ಟು 75 ಸಾವಿರ ನಿವೇಶನ  ಗಳಲ್ಲಿ ಅಕ್ರಮ ಮನೆ ನಿರ್ಮಾಣವಾಗಿದೆ ಎಂಬ ಅಂದಾಜು ಇದ್ದು ಸಕ್ರಮಗೊಳಿಸುವು  ದರಿಂದ ಸುಮಾರು 25 ಸಾವಿರ ಕೋಟಿ. ವರೆಗೆ ಸಂಗ್ರಹದ ಗುರಿ ಹೊಂದಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಇರುವ ಪ್ರಕರಣವನ್ನೂ ಇತ್ಯರ್ಥಗೊಳಿಸ  ಬೇಕಾಗಿದೆ ಎಂದು ಹೇಳಿದರು.

ಲೇಔಟ್‌ಗಳಲ್ಲಿ ಅನುಮತಿ: ಖಾಸಗಿ ಲೇ ಔಟ್‌ನಲ್ಲಿ ಶೇ. 40ರಷ್ಟು ಭಾಗದಲ್ಲಿ ಮನೆ ಅಥವಾ ನಿವೇಶನ ಸಕಲ ಮೂಲಸೌಕರ್ಯ  ದೊಂದಿಗೆ ಪೂರ್ಣಗೊಳಿಸಿದ್ದರೆ ಅಲ್ಲಿ ಮಾತ್ರ ಮಾರಾಟಕ್ಕೆ ಆನುಮತಿ, ಎರಡನೇ ಹಂತದಲ್ಲಿ ಶೇ.30  ಹಾಗೂ ಮೂರನೇ ಹಂತದಲ್ಲಿ ಉಳಿದ ಕಡೆ ಮಾರಾಟಕ್ಕೆ ಅನುಮತಿ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಒಟ್ಟಾರೆ ಲೇ ಔಟ್‌ನ ವ್ಯಾಪ್ತಿಗೆ ಇದು ಅನ್ವಯ ಆಗದು. ಕೇವಲ ಅಭಿವೃದಿಟಛಿ ಸೌಕರ್ಯಗಳೊಂದಿಗೆ  ಪೂರ್ಣಗೊಳಿಸಿದ ಭಾಗಕ್ಕೆ ಮಾತ್ರ ಎಂದು ಹೇಳಿದರು.

ಬಿಡಿಎ ಕಾಯ್ದೆ 38 ಸಿ ಈಗಾಗಲೇ ಇದ್ದು, ತಿದ್ದುಪಡಿಯಲ್ಲಿ 38-ಡಿ ಮಾಡಲಾಗಿದೆ. ಇದರಿಂದಾಗಿ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಅವಕಾಶ ಕಲ್ಪಿಸಿದಂತಾಗಿದೆ.
-ಜೆ.ಸಿ. ಮಾದುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next