ಹಳಿಯಾಳ: ಪ್ರತಿವರ್ಷ ರೈತರಿಗೆ ಮೋಸ ಮಾಡಿ ವಿಶ್ವಾಸ ಕಳೆದುಕೊಂಡ ಹುಲ್ಲಟ್ಟಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕೂಡಲೇ ಕಬ್ಬಿನ ಬಾಕಿ ಹಣ ನೀಡದಿದ್ದರೆಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದುರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರಕಾಜಗಾರ ಕಿಡಿ ಕಾರಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಕಟಾವು, ಸಾಗಾಣೆಯಿಂದ ಹಿಡಿದು ಪ್ರತಿ ಹಂತದಲ್ಲಿ ಎಡವಿರುವ ಪ್ಯಾರಿ ಕಾರ್ಖಾನೆ ರೈತರಿಗೆ ಮೊಸಮಾಡಿದೆ. ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2016-17ನೇ ಸಾಲಿನಲ್ಲಿ ಕಂಪೆನಿಯವರೇ ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಕ್ಲೃಕರರ ಮುಂದೆ ಒಪ್ಪಿಕೊಂಡಂತೆ ಪ್ರತಿ ಟನ್ ಕಬ್ಬಿಗೆ 305 ರೂ. ವನ್ನುಈವರೆಗೆ ರೈತರಿಗೆ ನೀಡದೆ ವಂಚಿಸಿದೆ ಎಂದು ಆರೋಪಿಸಿದರು.
ಅಲ್ಲದೇ ಈ ವರ್ಷದ ಹಂಗಾಮಿನಲ್ಲಿ ನುರಿಸಿದ ಕಬ್ಬಿನ ಬೆಲೆಯನ್ನು ಬೇರೆ ಕಾರ್ಖಾನೆಗಳಿಗಿಂತಲೂ ಕಡಿಮೆ ಹಣ ಸಂದಾಯ ಮಾಡಿದ್ದು ಈ ಬಗ್ಗೆ ಸ್ಥಳೀಯ ಶಾಸಕರು, ವಿಪ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಚರ್ಚಿಸಿ ಸರ್ಕಾರದಿಂದ ಒತ್ತಡ ತಂದು ಬಾಕಿ ಹಣ ಕೊಡಿಸುವಂತೆ ಆಗ್ರಹಿಸಿದರು. ರೈತರಿಗೆ ಬಾಕಿ ಹಣ ದೊರೆಯದೆ ಇದ್ದರೇ ಶಾಸಕರು, ಸಚಿವರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಬ್ಬು ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಘಾಡಿ ಮಾತನಾಡಿ ವಿದ್ಯುತ್ ಇಲಾಖೆ ಖಾಸಗಿಕರಣ ನಿಲ್ಲಿಸಬೇಕು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಕೈ ಬಿಡಬೇಕು, ರಾಜ್ಯ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ಮತ್ತು ಎಸ್‌ಎಪಿ ಹೆಚ್ಚಿನ ಬೆಲೆ ನಿಗದಿ ಪಡಿಸಬೇಕು. ಕಳೆದ ಬೆಳೆವಿಮೆ ಹಣ ಕೂಡಲೇ ಜಮೆ ಮಾಡಲು ಆದೇಶಿಸಬೇಕು. ಕೃಷಿ ಕ್ಷೇತ್ರವನ್ನು ನಾಶಮಾಡಬಹುದಾದ ಕಾಯ್ದೆಗಳನ್ನುಸು ಗ್ರಿವಾಜ್ಞೆ ಮೂಲಕ ಜಾರಿಗೆ ತರುತ್ತಿರುವುದು ಖಂಡನೀಯವಾಗಿದೆ ಎಂದಿರುವ ಅವರು, ಈ ಎಲ್ಲ ಸರ್ಕಾರದ ಕಾರ್ಯವೈಖರಿಗಳನ್ನು ವಿರೋ ಸಿ ರಾಜ್ಯ ಸಂಘಟನೆಗಳ ತಿರ್ಮಾನದಂತೆ ಸೆ.21 ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ಮಾತನಾಡಿ ಕಳೆದ ವರ್ಷದ ಅತಿವೃಷ್ಠಿ, ಪ್ರವಾಹದಿಂದ ತಾಲೂಕಿನ ತಟ್ಟಿಹಳ್ಳದ ದಂಡೆಯಲ್ಲಿರುವ ರೈತರ ಬೆಳೆ ಹಾನಿ, ಮನೆಹಾನಿ ಮತ್ತು ಇತರೆ ನಷ್ಟಗಳಿಗೆ ಇದುವರೆಗೆಪರಿಹಾರ ದೊರೆತಿಲ್ಲ. ಹೀಗಾಗಿ ಕೂಡಲೇ ಪರಿಹಾರದೊರೆಯದೆ ಇದ್ದರೇ ಸ್ಥಳೀಯ ಶಾಸಕರು ಮತ್ತು ಸರ್ಕಾರದ ವಿರುದ್ಧ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೊಷ್ಠಿಯಲ್ಲಿ ಬಾಬು ಮಿರಾಶಿ, ಮಂಜುನಾಥ ಬೆಡದೊಳಕರ, ಹನುಮಂತ ಕೊಲಕರ ಇದ್ದರು.