ಬೀದರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಎನ್‌ಎಸ್‌ಎಸ್ ಕೆ ಮಾದರಿಯಲ್ಲಿ ರೈತರ ಪರವಾದ ನಿಲುವು ಪ್ರಕಟಿಸುವ ವಿಶ್ವಾಸವಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.
ದಿ| ಗುರುಪಾದಪ್ಪ ನಾಗಮಾರಪಳ್ಳಿಯವರು ಹಾಗೂ ಅವರ ಮಗ ಉಮಾಕಾಂತ್ ನಾಗಮಾರಪಳ್ಳಿ ಅವರು ಯಾವಾಗಲೂ ರೈತರ ಪರವಾದ ನಿಲುವು ಹೊಂದಿದ್ದರು. 2019-20ರಲ್ಲಿ ಉಮಾಕಾಂತ ಅವರು ಎನ್‌ಎಸ್ ಎಸ್‌ಕೆ ಅಧ್ಯಕ್ಷರಾಗಿದ್ದ ಅವ ಧಿಯಲ್ಲಿ ಜನಪ್ರತಿನಿ ಧಿಗಳು ಹಾಗೂ ರೈತರ ಅಭಿಪ್ರಾಯದಂತೆ ಪ್ರತಿ ಟನ್ ಕಬ್ಬಿಗೆ 2,250 ನಿಗದಿ ಮಾಡಲಾಗಿತ್ತು. ಅದನ್ನು ತಾವು ಒಪ್ಪಿದರಲ್ಲದೆ ಮುಂದಾಳತ್ವ ವಹಿಸಿ ಎಲ್ಲ ಕಾರ್ಖಾನೆಗಳು ಒಪ್ಪಿಗೆ ನೀಡುವಂತೆ ಮನವೊಲಿಕೆ ಮಾಡಿಸಿದ್ದರು.
ಎಲ್ಲ ಕಾರ್ಖಾನೆಗಳು ಸಭೆಯ ನಿರ್ಣಯದಂತೆ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಿದ್ದವು. 2020-21ನೇ ಸಾಲಿಗೆ 2,400 ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಇದುವೆರೆಗೂ ಯಾವ ಸಕ್ಕರೆ ಕಾರ್ಖಾನೆಯೂ ರೈತರಿಗೆ ಪಾವತಿ ಮಾಡಿರಲಿಲ್ಲ. ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಕರೆದ ಸಭೆಗೂ ಎನ್‌ಎಸ್‌ಎಸ್‌ಕೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ ಅವರನ್ನು ಹೊರತುಪಡಿಸಿ ಇತರೆ ಅಧ್ಯಕ್ಷರು ಖುದ್ದು ಹಾಜರಿರಲಿಲ್ಲ. ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಚಿವರು ಉಮಾಕಾಂತ ನಾಗಮಾರಪಳ್ಳಿಯವರು ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರಂತೆ ರೈತಪರ ತೆಗೆದುಕೊಂಡ ಸಭೆಯ ನಿರ್ಣಯವನ್ನು ಸಾಕಾರಗೊಳಿಸಿ ತಮಗಿರುವ ರೈತಪರ ವ್ಯಕ್ತಪಡಿಸಿದ್ದನ್ನು ಸಚಿವರು ಕೊಂಡಾಡಿದ್ದರು.
2019-20ನೇ ಸಾಲಿನ ಕಬ್ಬಿನ ಬೆಲೆ ನಿಗದಿ ಮಾಡುವ ಸಭೆಯ ನಿರ್ಣಯವನ್ನು ಎತ್ತಿ ಹಿಡಿದು ರೈತರಿಗೆ ಹಣ ಪಾವತಿ ಮಾಡುವಲ್ಲಿ ಉಮಾಕಾಂತ ನಾಗಮಾರಪಳ್ಳಿಯವರ ಪಾತ್ರ ಹಿರಿದೆಂದು ಬಣ್ಣಿಸಿದರು. ಲಾಕ್‌ಡೌನ್‌ನಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ರೈತರೊಂದಿಗೆ ನಿಲ್ಲಬೇಕಿದೆ. ನಾನು ಸದಾ ರೈತರೊಂದಿಗೆ ಇದ್ದು, ಸರ್ಕಾರವೂ ರೈತರ ಪರವಾಗಿದೆ ಎಂದು ಹೇಳಿದ್ದು, ಉಳಿದ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಹಣ ಪಾವತಿಸುವ ಬಗ್ಗೆ ಸ್ಪಷ್ಟಪಡಿಸದೇ ಇದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರಿಗೆ ಸಚಿವರು ಎಚ್ಚರಿಸಿದ್ದಾರೆ.