ನಟ ಡಾರ್ಲಿಂಗ್ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯಕ್ಕೆ ಚಿತ್ರದ ಹಾಡುಗಳನ್ನು ಚಿತ್ರೀಕರಿಸುವಲ್ಲಿ ನಿರತವಾಗಿದೆ.
“ಶುಗರ್ ಫ್ಯಾಕ್ಟರಿ’ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬೆಂಗಳೂರಿನ ಹೆಸರಾಂತ ಪಬ್ವೊಂದರಲ್ಲಿ ಹಾಕಲಾಕಲಾಗಿರುವ ಅದ್ಧೂರಿ ಸೆಟ್ನಲ್ಲಿ ಸೆರೆಹಿಡಿಯಲಾಗುತ್ತಿದೆ. ಇನ್ನು ಚಂದನ್ ಶೆಟ್ಟಿ ತಾನೇ ಬರೆದು, ಹಾಡಿರುವ ಈ ಹಾಡಿನ ಚಿತ್ರೀಕರಣದಲ್ಲಿ
ನಾಯಕ ಡಾರ್ಲಿಂಗ್ ಕೃಷ್ಣ ಚಿತ್ರದ ಮೂವರು ನಾಯಕಿಯರಾದ ಸೋನಾಲ್ ಮಾಂತೆರೋ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಕಫಿರ್ ರಫಿ ಸಂಗೀತ ನಿರ್ದೇಶನದ ಈ ಹಾಡಿಗೆ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ತಮ್ಮ ಕ್ಯಾಮರಾದಲ್ಲಿ ಈ ಹಾಡನ್ನು ಸೆರೆಹಿಡಿಯುತ್ತಿದ್ದಾರೆ.
ಇದನ್ನೂ ಓದಿ:ಟ್ರೇಲರ್ ನಲಿ ದರ್ಶನ ನೀಡಲು ಕೋಟಿಗೊಬ್ಬ- ಸಲಗ ರೆಡಿ
“ಬಾಲಮಣಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಗಿರೀಶ್ ಆರ್. ನಿರ್ಮಿಸುತ್ತಿರುವ, “ಶುಗರ್ ಫ್ಯಾಕ್ಟರಿ’ ಚಿತ್ರಕ್ಕೆ ದೀಪಕ್ ಅರಸ್ ನಿರ್ದೇಶನವಿದೆ. ಸದ್ಯ ಹಾಡುಗಳ ಚಿತ್ರೀಕರಣ ಮುಗಿದ ಬಳಿಕ ಚಿತ್ರದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.