Advertisement

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ

11:18 AM Jul 25, 2017 | Team Udayavani |

ಕೆಂಗೇರಿ: ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಅದಕ್ಕೆ ಸರ್ಕಾರ ಮಾತ್ರ ಸೀಮಿತವಾಗದೆ ಸಂಘಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸುಂದರ ಹಾಗೂ ಉತ್ತಮ ಪರಿಸರ ಹೊಂದಲು ಸಾಧ್ಯ ಎಂದು ಮಹೀಂದ್ರ ಫೈನಾನ್ಸ್‌ನ ವೃತ್ತ ಮುಖ್ಯಸ್ಥ ಪಿ.ಪ್ರಸಾದ್‌ ಹೇಳಿದರು.

Advertisement

ಕೆಂಗೇರಿ ಉಪನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಹೀಂದ್ರ ಫೈನಾನ್ಸ್‌ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಶ್ರಮಜೀವಿ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಮತ್ತು ಇಕೋ ಕ್ಲಬ್‌ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸ್ವತ್ಛಭಾರತ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸಸಿ ನೆಡಲು ಸಸಿ ಹಾಗೂ ಕಸ ವಿಂಗಡನೆಗಾಗಿ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು.

ಹಿಂದಿನ ವರ್ಷ ಸಂಸ್ಥೆಯ ವತಿಯಿಂದ 8350 ಗಿಡಗಳನ್ನು ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ವಿತರಿಸಲಾಗಿತ್ತು. ಈ ವರ್ಷ 12500 ಗಿಡಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ್‌ ಮಾತನಾಡಿ, ಮಹೀಂದ್ರ ಫೈನಾನ್ಸ್‌ ಸಂಸ್ಥೆ ಪರಿಸರದ ಬಗ್ಗೆ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಮೂಲಕ ಹಾಗೂ ಸ್ವತ್ಛತೆಗಾಗಿ ಕಸ ಸಂಗ್ರಹಣಾ ಡಬ್ಬಿಗಳನ್ನು ವಿತರಿಸುತ್ತಿರುವುದಲ್ಲದೆ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಸಂಸ್ಥೆಯ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ಮಧುಸೂದನ್‌, ಎಫ್ಡಿ ವಿಭಾಗ ಮುಖ್ಯಸ್ಥ ರವೀಂದ್ರ ಎನ್‌, ವಿಭಾಗೀಯ ನಿರ್ವಾಹಕ ಮಹೇಶ್‌ಕುಮಾರ್‌ ಶೆಟ್ಟಿ, ಶಶಿಧರ್‌ರಾವ್‌, ಶ್ರಮಜೀವಿ ಸಂಸ್ಥೆ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್‌, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿ.ಶ್ರೀನಿವಾಸಮೂರ್ತಿ, ಉಪಾಧ್ಯಾಯಿನಿ ಆರ್‌.ಸುಶೀಲ ಇತರರು ಇದ್ದರು. ಸುಮಾರು 835 ಸಸಿಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next