Advertisement

ನೀರಿಗೆ ಬರವಿಲ್ಲ-ಅನವಶ್ಯಕ ಬಳಕೆ ತಗ್ಗಲಿ

03:00 PM Apr 25, 2022 | Team Udayavani |

ಜಮಖಂಡಿ: ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಬರವಿಲ್ಲ. ಆದರೆ, ನಗರಪ್ರದೇಶದಲ್ಲಿ ನೀರಿನ ಬಳಕೆಗೆ ಮಿತಿ ಇಲ್ಲದಂತಾಗಿದೆ. ಮತಕ್ಷೇತ್ರದ 42 ಗ್ರಾಮಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿದ್ದು, ಅಂತರ ಕುಸಿದಿರುವ ಪ್ರದೇಶಗಳಲ್ಲಿ, ತೋಟದ ವಸ್ತಿಗಳಲ್ಲಿ ನೀರಿನ ಸಮಸ್ಯೆಗಳು ಕಂಡು ಬಂದಿವೆ.

Advertisement

ತಾಲೂಕಿನ ಕಲಹಳ್ಳಿ ಗ್ರಾಮದ ಅರಬ ವಸತಿಯಲ್ಲಿ ಮತ್ತು ತುಂಗಳ ಗ್ರಾಮ, ಹವಾಲ್ದಾರ ವಸ್ತಿಯಲ್ಲಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಕುಂಬಾರಹಳ್ಳ, ಶೂರ್ಪಾಲಿ, ಗದ್ಯಾಳ, ಕಡಕೋಳ, ಹುಲ್ಯಾಳ, ಹುನ್ನೂರ, ಗೋಠೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬರುವ ಗ್ರಾಮದ ಜನರಿಗೆ ಸಮರ್ಪಕವಾಗಿ ನೀರು ಲಭಿಸುತ್ತಿಲ್ಲ. ವಿದ್ಯುತ್‌ ಪೂರೈಕೆ ತೊಂದರೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.

ಹಿಪ್ಪರಗಿ ಬ್ಯಾರೇಜ್‌ದಿಂದ ಚಿಕ್ಕಪಡಸಲಗಿಯ ದಿ| ಸಿದ್ದು ನ್ಯಾಮಗೌಡ ಶ್ರಮಬಿಂದ ಸಾಗರದವರಗೆ ಕೃಷ್ಣಾನದಿಯಲ್ಲಿ ಈಗಾಗಲೇ 2.5ಟಿಎಂಸಿ ನೀರು ಸಂಗಹ್ರವಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ನೀರಿನ ಕೊರತೆ ನಿಗಿಸಲಿದೆ. ತಾಲೂಕಿನ ಚಿಕ್ಕಪಡಸಲಗಿಯ ಸಿದ್ದು ನ್ಯಾಮಗೌಡ ಶ್ರಮಬಿಂದು ಸಾಗರದಲ್ಲಿ 515 ಮೀಟರ್‌ ನೀರಿನ ಸಂಗ್ರಹ ಹಿನ್ನೆಲೆಯಲ್ಲಿ ಎಲ್ಲ ಗೇಟ್‌ ಅಳವಡಿಸಲಾಗಿದೆ. ಹಿಪ್ಪರಗಿ ಜಲಾಶಯದಿಂದ 0.5 ಟಿಎಂಸಿ ನೀರು ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ತಲುಪಿದ ಹಿನ್ನೆಲೆಯಲ್ಲಿ ಜಮಖಂಡಿ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆಯಿದೆ.

ಹಿಪ್ಪರಗಿ ಜಲಾಶಯದಲ್ಲಿ 5.5 ಟಿಎಂಸಿ ನೀರು ಸಂಗ್ರಹವಿದ್ದು, ಜಮಖಂಡಿ, ತೇರದಾಳ ಮತ್ತು ರಬಕವಿ-ಬನಹಟ್ಟಿ ನಗರಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಬೇಸಿಗೆ ನೀರು ಅಭ್ಯತೆ ಅರಿತು ಕೆಲಸ ಮಾಡುವ ಬದಲಾಗಿ ಜಮಖಂಡಿ ನಗರಸಭೆ ಅಧಿಕಾರಿಗಳು ಅನವಶ್ಯಕವಾಗಿ ಟ್ಯಾಂಕರ್‌ ಮೂಲಕ ರಸ್ತೆಗಳಲ್ಲಿ ನೀರು ಸಿಂಪರಣೆ ಮಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿದೆ. ಸರಿಯಾದ ಸಮಯಕ್ಕೆ ನಗರದ ಮನೆಗಳಿಗೆ ನೀರು ಪೂರೈಕೆ ಮಾಡಬೇಕೆಂದು ಜನರ ಆಗ್ರಹವಾಗಿದೆ.

ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿಲ್ಲ: ಜಮಖಂಡಿ ಮತಕ್ಷೇತ್ರದಲ್ಲಿ ಜನ-ಜಾನುವಾರು ಮತ್ತು ರೈತರ ಬೆಳೆಗಳಿಗೆ ನೀರಿನ ಸಮಸ್ಯೆಯಿಲ್ಲ. ರಾಜ್ಯ ಸರಕಾರ ಬರಗಾಲ ಪೀಡತ ಪ್ರದೇಶವೆಂದು ಘೋಷಣೆ ಮಾಡದೇ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಗ್ರಾಪಂ ಅನುದಾನದಲ್ಲಿ ಮತ್ತು ನಗರಪ್ರದೇಶದಲ್ಲಿ ನಗರಸಭೆ ಅನುದಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಗಿಸುವ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಅವಶ್ಯಕತೆ ಇರುವ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು ಸೂಚನೆ ನೀಡಲಾಗಿದೆ ಎಂದರು. ಆನಂದ ನ್ಯಾಮಗೌಡ, ಶಾಸಕರು ಜಮಖಂಡಿ.

Advertisement

ಸಮಸ್ಯೆಗೆ ಸ್ಪಂದಿಸುವಂತೆ ನಿರ್ದೇಶನ ಜಮಖಂಡಿ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ತೊಂದರೆಯಿಲ್ಲ. ತಾಲೂಕಿನಲ್ಲಿ ನೀರಿನ ತೊಂದರೆ ಇರುವ ಗ್ರಾಮಗಳಲ್ಲಿ ಗ್ರಾಮಲೆಕ್ಕಾಧಿಕಾರಿ ಮತ್ತು ಪಿಡಿಒ ಮತ್ತು ಜಿಲ್ಲಾ ಪಂಚಾಯತ ನೈರ್ಮಲ್ಯ ಇಲಾಖೆ ನೇತೃತ್ವದಲ್ಲಿ ತಂಡ ರಚನೆ ಮಾಡುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಲಾಗಿದೆ. ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರಶಾಂತ ಚನಗೊಂಡ, ತಹಶೀಲ್ದಾರ್‌ ಜಮಖಂಡಿ           

-ಮಲ್ಲೇಶ ರಾ. ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next