Advertisement

Theerthahalli: ಘಟನೆಯಿಂದ ತೀವ್ರ ನೋವಾಗಿದೆ: ಮೂವರ ಸಜೀವ ದಹನ ಪ್ರಕರಣಕ್ಕೆ ಆರಗ ಹೇಳಿಕೆ

01:07 PM Oct 08, 2023 | Kavyashree |

ತೀರ್ಥಹಳ್ಳಿ: ಘಟನೆಯಿಂದ ತೀವ್ರ ನೋವಾಗಿದೆ. ನನಗೆ ತುಂಬಾ ಹತ್ತಿರದ ಕುಟುಂಬದ ಇದು. ಸುಮಾರು 35-40 ವರ್ಷದಿಂದ ಪರಿಚಿತ ಕುಟುಂಬ. ಆರ್ಥಿಕವಾಗಿ ಕೂಡ ಅನುಕೂಲವಾಗಿದ್ದಾರೆ. ಅಣ್ಣ – ತಮ್ಮಂದಿರೆಲ್ಲಾ ಹೊರ ದೇಶದಲ್ಲಿದ್ದಾರೆ. ಈ ರೀತಿ ಆತ್ಮಹತ್ಯೆ ಪ್ರಯತ್ನ ಮಾಡಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಆಸ್ಪತ್ರೆಯಲ್ಲಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.

Advertisement

ಅರಳಿಸುರುಳಿಯಲ್ಲಿ ಮೂವರ ಸಜೀವ ದಹನ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿ ಉದಯವಾಣಿ ಜೊತೆಗೆ ಮಾತನಾಡಿದ ಅವರು ದೇಹಗಳು ಗುರುತು ಸಿಗದ ರೀತಿಯಲ್ಲಿ ಆಗಿದೆ. ಘಟನೆ ಆದಾಗ ಸಾಕಷ್ಟು ಅಭಿಪ್ರಾಯ ಬರೋದು ಸಹಜ. ಈ ರೀತಿ ಹಿಂಸೆ ಕೊಟ್ಟುಕೊಂಡು ಸಾಯುವ ಅನಿವಾರ್ಯತೆ ಕುಟುಂಬಕ್ಕಿಲ್ಲ. ಹತ್ತಾರು ಎಕರೆ ಜಮೀನು ಇದೆ.., ವ್ಯಾಪಾರ ಕೂಡ ಇದೆ. ಪೊಲೀಸ್ ತನಿಖೆಯಿಂದಷ್ಟೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next