Advertisement

ಸೂಯೆಜ್‌ ಕಾಲುವೆ ಬ್ಲಾಕ್ ‌: ನೌಕೆಗಳಿಗೆ ಕಡಲ್ಗಳ್ಳರ ಭೀತಿ!

08:14 PM Mar 27, 2021 | Team Udayavani |

ಸೂಯೆಜ್‌:  ಈಜಿಪ್ಟ್ ನ ಸೂಯೆಜ್‌ ಕಾಲುವೆಯಲ್ಲಿ ಬೃಹತ್‌ ಸರಕು ಸಾಗಣೆ ನೌಕೆ ಸಿಲುಕಿಕೊಂಡು 5 ದಿನಗಳು ಕಳೆದರೂ, ನೌಕೆಯನ್ನು ಸ್ವಲ್ಪವೂ ಅಲುಗಾಡಿಸಲು ರಕ್ಷಣಾ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.

Advertisement

ಕಾಲುವೆಯಲ್ಲಿ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿರುವ ನೌಕೆಯನ್ನು ಬದಿಗೆ ಸರಿಸಲು ಭಾರೀ ಸಂಖ್ಯೆಯ ಟಗ್‌ಬೋಟ್‌ಗಳು, ಡ್ರೆಡ್ಜರ್‌ಗಳನ್ನು ನಿಯೋಜಿಸಲಾಗಿದೆ. ಇದರ ನಡುವೆಯೇ, ಕಾಲುವೆಯಲ್ಲಿ ಸಂಚರಿಸಲಾಗದೇ ಅನೇಕ ಸರಕು ಸಾಗಣೆ ಹಡಗುಗಳು ಪರ್ಯಾಯ ಮಾರ್ಗಗಳ ಮೊರೆಹೋಗಿದ್ದು, ಕಡಲ್ಗಳ್ಳರ ಜಾಲದೊಳಕ್ಕೆ ಸಿಲುಕುವ ಭೀತಿ ಮೂಡಿದೆ.

ದ್ರವೀಕೃತ ನೈಸರ್ಗಿಕ ಅನಿಲವನ್ನು ಹೊತ್ತ ಕನಿಷ್ಠ 7 ನೌಕೆಗಳು ಪಥ ಬದಲಿಸಿ, ದೀರ್ಘಾವಧಿಯ ದಾರಿಯ ಮೂಲಕ ಅಂದರೆ ದಕ್ಷಿಣ ಆಫ್ರಿಕಾದ ಕೇಪ್‌ ಆಫ್ ಗುಡ್‌ ಹೋಪ್‌ ಮೂಲಕ ಯುರೋಪ್‌ಗೆ ತೆರಳುತ್ತಿವೆ. ಇನ್ನೂ 9 ಟ್ಯಾಂಕರ್‌ಗಳು ಇದೇ ದಾರಿಯಲ್ಲಿ ಸಾಗಲು ಮುಂದಾಗಿವೆ. ಆದರೆ, ಈ ದಾರಿಯಲ್ಲಿ ಸಾಗಿದರೆ ನೌಕೆಗಳ ಇಂಧನ ವೆಚ್ಚವು ವಿಪರೀತವಾಗಿ ಹೆಚ್ಚುವುದು ಮಾತ್ರವಲ್ಲ, ಈ ಹಡಗುಗಳು ಕಡಲ್ಗಳ್ಳರ ಕಪಿಮುಷ್ಟಿಯೊಳಗೆ ಸಿಲುಕುವ ಭೀತಿಯಿದೆ. ಏಕೆಂದರೆ, ಈ ಮಾರ್ಗವು ಜಗತ್ತಿನಲ್ಲೇ ಶಿಪ್ಪಿಂಗ್‌ಗೆ ಅತಿ ಅಪಾಯಕಾರಿ ಪ್ರದೇಶವಾಗಿದೆ. ಇಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಿರುವ ಕಾರಣ, ನೌಕೆಯಲ್ಲಿರುವ ಜನರಿಗೂ, ಸರಕುಗಳಿಗೂ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ :ಡಿಕೆಶಿ ವಿರುದ್ಧ ಬಳಸಿದ ಅಸಭ್ಯ ಪದಕ್ಕೆ ವಿಷಾದ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ

Advertisement

Udayavani is now on Telegram. Click here to join our channel and stay updated with the latest news.

Next