Advertisement
ಬಲವಾದ ಗಾಳಿಯಿಂದ ಸಮಸ್ಯೆ ಸುಯೆಜ್ ಕಾಲುವೆ ಆಯೋಗದ ಮುಖ್ಯಸ್ಥರಾದ ಲೆಫ್ಟನೆಂಟ್ ಜನರಲ್ ಒಸಾಮಾ ರಬೇಯ್ ಪ್ರಕಾರ, ಸುಯೆಜ್ ಕಾಲುವೆಯ ಪ್ರಾಂತ್ಯದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯು ಕಾರ್ಯಾಚರಣೆಗೆ ತೊಡಕುಂಟು ಮಾಡುತ್ತಿದೆ. ಇದರ ಜೊತೆಗೆ, ಕೆಲವಾರು ತಾಂತ್ರಿಕ ಇತಿ-ಮಿತಿಗಳಿಂದಾಗಿ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. “”ಈ ಸಮಸ್ಯೆಯು ಮಾನವನ ತಪ್ಪಿನಿಂದ ಆಗಿರುವುದೋ ಅಥವಾ ತಾಂತ್ರಿಕ ದೋಷದಿಂದ ಆಗಿರುವುದೋ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಎವರ್‌ಗ್ರೀನ್ ಹಡಗಿನ ಮಾಲೀಕರಾದ ಶೋಯ್ ಕಿಸೆನ್ ಸಂಸ್ಥೆ ಪ್ರಕಟಣೆ ನೀಡಿದ್ದು, “”ನಾವೀಗ ಕಷ್ಟಕರ ಸಂದರ್ಭದಲ್ಲಿ ಸಿಲುಕಿದ್ದೇವೆ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಅಲ್ಲಿಂದ ತಗೆಯಲು ನಾವು ಈವರೆಗೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಇದು ಯಾವಾಗ ಪರಿಹಾರವಾಗುತ್ತದೆ ಎಂಬುದನ್ನು ಈಗಲೇ ಹೇಳಲಾಗದು” ಎಂದಿದೆ. ಅಲ್ಲಿಗೆ, ಸುಯೆಜ್ ಕಾಲುವೆಯಲ್ಲಿ ಇತರ ಹಡಗುಗಳು ಸರಾಗವಾಗಿ ಹರಿದಾಡಲು ಇನ್ನೂ ಸಾಕಷ್ಟು ಸಮಯವೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
Related Articles
Advertisement
200 ಹಡಗುಗಳು ವೈಟಿಂಗ್ಶನಿವಾರದ ಹೊತ್ತಿಗೆ, ಸುಯೆಜ್ ಕಾಲುವೆಯು ತೆರವಾಗುವುದನ್ನು ಕಾಯುತ್ತಿರುವ ಹಡಗುಗಳ ಸಂಖ್ಯೆ 200ಕ್ಕೇರಿದೆ ಎಂದು ಮ್ಯಾಕ್ಸ್ ವರ್ಲ್ ವ್ಯೂ ಎಂಬ ಸಂಸ್ಥೆ ಹೇಳಿದೆ. ಉಪಗ್ರಹದಿಂದ ಕ್ಲಿಕ್ಕಿಸಲಾಗಿರುವ ಫೋಟೋವೊಂದನ್ನು ಸಂಸ್ಥೆ ಪ್ರಕಟಿಸಿದ್ದು, ಸುಯೆಜ್ ಕಾಲುವೆಯ ಸುಮಾರು 2,500 ಚದರ ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಸುಮಾರು 200 ಹಡಗುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ಹೇಳಿದೆ.