ತೆರಬೇಕಾದೀತು. ಹೀಗಾಗಿ ಬಳಸುವ ಮುನ್ನ ತಿಳಿದುಕೊಳ್ಳಿ.
Advertisement
ಪ್ರಾಚೀನ ಕಾಲದಲ್ಲಿ ಹೊಗೆಯಿಂದ ಉಜ್ಜಿ ಬಟ್ಟೆಗಳನ್ನು ಶುಚಿಗೊಳಿಸುತ್ತಿದ್ದರಂತೆ. ಬಳಿಕ ನಮ್ಮ ಹಿರಿಯರು ನದಿ ದಡದ ಕಲ್ಲಿನಲ್ಲಿ ಬಟ್ಟೆಯನ್ನು ಒಗೆಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಬಟ್ಟೆ ಒಗೆಯುವ ಕಲ್ಲುಗಳು ಮನೆಯಂಗಳಕ್ಕೆ ಬಂದವು. ಕೆಲವು ವರ್ಷಗಳ ಹಿಂದೆ ಅದೇ ಬಟ್ಟೆ ಒಗೆಯುವ ಕಲ್ಲು ಮನೆಯೊಳಗೂ ಬಂತು. ಆದರೆ ಈಗ ಕೈಯಿಂದ ಬಟ್ಟೆ ಒಗೆಯುವ ತಾಪತ್ರಯವೇ ಇಲ್ಲ ಯಾಕೆಂದರೆ ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮೆಷಿನ್ ಬಂದಿದೆ. ಬೇಗನೆ ಬಟ್ಟೆ ಶುಚಿಯಾಗಿ ಹೊರಗೆ ಬರುತ್ತದೆ. ಶ್ರಮವೂ ಕಡಿಮೆ. ಸಮಯವೂ ಉಳಿತಾಯವಾಗುತ್ತದೆ ಎಂದು ಎಲ್ಲರೂ ವಾಷಿಂಗ್ ಮೆಷಿನ್ ಮೊರೆಹೋಗುತ್ತಾರೆ.
ವಾಷಿಂಗ್ ಮೆಷಿನ್‌ನ ಬುಶ್‌ನಲ್ಲಿ ಲೀಕೇಜ್ ಪ್ರಾರಂಭವಾದರೆ ಆದರಲ್ಲಿ ಕರ್ಕಶ ಸ್ವರ ಬರಲು ಪ್ರಾರಂಭವಾಗುತ್ತದೆ. ಕೂಡಲೇ ಬುಶ್ ಬದಲಾಯಿಸಿಕೊಂಡರೆ ಉತ್ತಮ. ಇಲ್ಲವಾದಲ್ಲಿ ಮೆಷಿನ್ ಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಬುಶ್ ಬದಲಾಯಿಸಿಕೊಳ್ಳುವುದು ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಆದರೆ ಬುಶ್ ಬದಲಾಯಿಸದೆ ಇದ್ದಲ್ಲಿ ಅದರಿಂದ ಮೆಷಿನ್‌ನ ವಿವಿಧ ಭಾಗಗಳಿಗೆ ಆಗುವ ಹಾನಿಯನ್ನು ಸರಿಪಡಿಸಲು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಮೆಷಿನ್‌ನ ಕೆಪಾಸಿಟಿಗಿಂತ ಹೆಚ್ಚು ಬಟ್ಟೆ ಹಾಕಿ ನೀರು ಕಡಿಮೆ ಹಾಕಿದರೆ ಮೋಟಾರ್ ಬರ್ನ್ ಆಗುವ ಸಾಧ್ಯತೆ ಇದೆ. ಅದ್ದರಿಂದ ಅದರ ಕೆಪಾಸಿಟಿಯಷ್ಟೇ ಬಟ್ಟೆಗಳನ್ನು ಒಗೆಯಲು ಹಾಕಿ. ಬಟ್ಟೆಗಿಂತ ಒಂದು ಇಂಚು ಹೆಚ್ಚು ನೀರು ಹಾಕಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಬಟ್ಟೆಗಳನ್ನು ಮೆಷಿನ್‌ಗೆ ಹಾಕುವ ಮುನ್ನ ಬಟ್ಟೆಗಳನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ಅದರಲ್ಲಿರುವ ನಾಣ್ಯಗಳು, ಪಿನ್‌ನಂತಹ ವಸ್ತುಗಳಿಂದಾಗಿ ಮೆಷಿನ್‌ನ ಡ್ರೈನ್ ಪಂಪ್ ಬ್ಲಾಕ್ ಆಗಿ ಪಂಪ್ ಡಾಮೇಜ್ ಆಗುವ ಸಾಧ್ಯತೆ ಇರುತ್ತದೆ.
Related Articles
Advertisement
ಬಟ್ಟೆಯನ್ನು ಒಮ್ಮೆ ಸ್ವಲ್ಪ ಕೈಯಿಂದ ಒಗೆದು ಹಾಕಿದರೆ ಒಳ್ಳೆಯದು. ಯಾಕೆಂದರೆ ಆವಾಗ ವಿದ್ಯುತ್ ಹೆಚ್ಚು ವ್ಯರ್ಥವಾಗುವುದಿಲ್ಲ. ಬಟ್ಟೆಯೂ ಹೆಚ್ಚು ಶುಚಿಯಾಗಲು ಸಾಧ್ಯ. ಹೆಚ್ಚಾಗಿ ಎಲ್ಲರೂ ವಾಷಿಂಗ್ ಮೆಷಿನ್ ಅನ್ನು ಬಾತ್‌ರೂಮ್‌ನಲ್ಲಿ ಇಡುತ್ತಾರೆ. ಇದು ನೀವು ಮಾಡುವ ದೊಡ್ಡ ತಪ್ಪು. ಮೆಷಿನ್‌ಗೆ ನೀರು ಬಿದ್ದರೆ ಅದರ ಕಂಟ್ರೋಲ್ ಬೋರ್ಡ್ ಬರ್ನ್ ಹಾಗೂ ಕೆಲವು ಪ್ರಮುಖ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ನೀರು ಬೀಳದ ಜಾಗದಲ್ಲಿ ಇಡುವುದು ಒಳ್ಳೆಯದು. ಆರು ತಿಂಗಳಿಗೊಮ್ಮೆ ಕ್ಲೀನಿಂಗ್ ಪೌಡರ್ ಹಾಕಿ ಅದರ ಟಬ್ ಕ್ಲೀನ್ ಮಾಡುವ ಹವ್ಯಾಸ ಇಟ್ಟುಕೊಳ್ಳಬೇಕು. ಟೆಕ್ನೀಶಿಯನ್ ಇದ್ದರೂ ಅವರು ಮೆಷಿನ್‌ನ ಒಳಭಾಗ ಕ್ಲೀನ್ ಮಾಡಲ್ಲ. ಹಾಗಾಗಿ ನೀವೇ ಪೌಡರ್ ಹಾಕಿ ಶುಚಿ ಮಾಡಿಕೊಳ್ಳಿ.
– ಪ್ರಜ್ಞಾ ಶೆಟ್ಟಿ