Advertisement

ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

02:25 AM Jul 11, 2017 | Team Udayavani |

ಮಲ್ಲಿಕಟ್ಟೆ: ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು ದಕ್ಷಿಣ ವಲಯ, ಲಯನ್ಸ್‌ ಕ್ಲಬ್‌, ಲಯನೆಸ್‌ ಕ್ಲಬ್‌ ಮಲ್ಲಿಕಟ್ಟೆ ಹಾಗೂ ದೇರಳಕಟ್ಟೆ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಬೆಂಗಳೂರಿನ ಸ್ಕಂದ ಚಾರಿಟೆಬಲ್‌ ಟ್ರಸ್ಟ್‌ನ ವತಿಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಮಲ್ಲಿಕಟ್ಟೆ ಲಯನ್ಸ್‌ ಕ್ಲಬ್‌ನಲ್ಲಿ ನಡೆಯಿತು.

Advertisement

ಶಾಸಕ ಜೆ. ಆರ್‌. ಲೋಬೋ ಉದ್ಘಾಟಿಸಿ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ವಿಶೇಷ ಪ್ರತಿಭೆಗಳಿವೆ.ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಶಿಕ್ಷಣದ ಮುಖ್ಯವಾಹಿನಿಗೆ ಬರುವಂತಾಗಲು ಅವರಿಗೆ ವೈದ್ಯಕೀಯ ಸೌಲಭ್ಯ ಮತ್ತು ಸಾಧನ ಸಲಕರಣೆಗಳ  ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌ಗಳು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೆಂಕಟೇಶ್‌ ಬಾಳಿಗ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಲಯನ್ಸ್‌ ಕ್ಲಬ್‌ ಸದಾ ಸಹಕಾರ ನೀಡುವುದಾಗಿ ಹೇಳಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಾಗೇವಾಡಿ ಮಾತನಾಡಿ, ದೈಹಿಕ ನ್ಯೂನತೆ ಎಂಬುದು ಅಶಕ್ತತೆ ಅಲ್ಲ. ಪ್ರೋತ್ಸಾಹ ಮತ್ತು ಅವಕಾಶ ನೀಡಿದರೆ ಅವರು ಹಲವು ಸಾಧನೆಗಳನ್ನು ಮಾಡಬಲ್ಲರು ಎಂದರು. ಡಯಟ್‌ನ ಉಪ ಪ್ರಾಂಶುಪಾಲೆ ದಯಾವತಿ, ರಂಗಭೂಮಿ ನಟ ಸುಧೀರ್‌ ರಾಜ್‌ ಉರ್ವ ಮಾತನಾಡಿದರು. ಆನಂತರ ಮುನ್ನೂರು ಶಾಲೆಯಲ್ಲಿ ಉಳ್ಳಾಲ ವ್ಯಾಪ್ತಿಯ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ ನಡೆಯಲಿರುವ ಬಗ್ಗೆ ಮಾಹಿತಿ ನೀಡಲಾಯಿತು. ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಅನಂತ್‌ ಕುಮಾರ್‌ ಅತ್ತಾವರ, ಲಯನೆಸ್‌ ಅಧ್ಯಕ್ಷೆ ನ್ಯಾನ್ಸಿ ಮಸ್ಕರೇನಸ್‌, ಖಜಾಂಚಿ ಕೋಮಲಾ ಶೆಟ್ಟಿ , ಶಿಕ್ಷಣ ಸಂಯೋಜಕಿ ಹಿಲ್ಡಾ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಗೀತಾ ಶಾನ್‌ಭಾಗ್‌ ಸ್ವಾಗತಿಸಿದರು. ಬಿಆರ್‌ಪಿ ದುರ್ಗಲತಾ ವಂದಿಸಿದರು. ಬಿಐಆರ್‌ಟಿ ಕಿಶೋರಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next