Advertisement
ತನ್ನ ಪ್ರತಿಭೆಗಳನ್ನು ಒರೆಗೆ ಹಚ್ಚುವ ದೃಷ್ಟಿಯಿಂದ ಪ್ರತಿಯೊಬ್ಬ ಮಗು ಯಾವುದಾದರೊಂದು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಶಿಕ್ಷಕ ಮುರಾರಿ ಅವರು ಸಾಹಿತ್ಯ, ಲಲಿತಕಲೆ, ಆರೋಗ್ಯ, ಎನ್‌ಸಿಸಿ, ವಿಜ್ಞಾನ, ಪರಿಸರ ಹಾಗೂ ಇಂಟರಾಕ್ಟ್ ಸಂಘಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿ ಸಂಘಗಳ ಸಂಚಾಲಕರು ಹಾಗೂ ಶಿಕ್ಷಕರನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ ಅವರು ಸಂಘಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವುಗಳಲ್ಲಿ ಭಾಗ ವಹಿಸುವಂತೆ ಕರೆ ಕೊಟ್ಟರು. ಪ್ರತಿ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಾಲಾ ಸಂಚಾಲಕ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಹಿರಿಯ ಶಿಕ್ಷಕಿ ಲಕ್ಷ್ಮೀ ಜಿ., ಪೆರ್ಮುದೆ ಮೋಹನ್ ಕುಮಾರ್, ಕೆನರಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲಲನಾ ಜೆ. ಶೆಣೈ ಮುಂತಾದವರು ಉಪಸ್ಥಿತರಿದ್ದರು. ಪ್ರಾಪ್ತಿ ಸ್ವಾಗತಿಸಿದರು. ಜ್ವಿನ್ ವಂದಿಸಿದರು. ವಿದ್ಯಾರ್ಥಿಗಳಾದ ಸೃಷ್ಟಿ, ನಂದನ್, ಸ್ಫೂರ್ತಿ ಹಾಗೂ ಅದಿತಿ ಕಾರ್ಯಕ್ರಮ ನಿರೂಪಿಸಿದರು. Advertisement
ಭಾಷಾ ಪ್ರಬುದ್ಧತೆ ಬೆಳೆಸಿ ಸಿರಿವಂತರಾಗಿ : ಅಣ್ಣಪ್ಪ
11:47 PM Jul 13, 2017 | Karthik A |
Advertisement
Udayavani is now on Telegram. Click here to join our channel and stay updated with the latest news.