Advertisement

ಕಾರ್ಮಿಕರ ಆಶ್ರಯ ತಾಣಕ್ಕೆ ಸುಧಾಕರ್‌ ಭೇಟಿ

02:51 PM Apr 11, 2020 | Suhan S |

ಬಾಗೇಪಲ್ಲಿ: ಪಟ್ಟಣದ ಪರಿಶಿಷ್ಟ ವರ್ಗ ಗಳ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ವಲಸೆ ಕಾರ್ಮಿಕರ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಶ್ರಯ ಪಡೆದಿರುವ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಆಶ್ರಯ ತಾಣಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪಟ್ಟಣದ ಹೊರ ವಲಯದ ಪ್ರಥಮ ದರ್ಜೆ ಕಾಲೀಜಿನಲ್ಲಿ ಆಶ್ರಯ ಪಡೆದಿರುವ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರನ್ನು ಶುಕ್ರವಾರ ಸಂಜೆ 5 ಗಂಟೆಗೆ ಭೇಟಿಯಾದ ಸಚಿವ ಡಾ.  ಸುಧಾಕರ್‌, ಇಲ್ಲಿ ನಿಮಗೆ ಅಧಿಕಾರಿಗಳು ಚೆನ್ನಾಗಿ ನೋಡಿಕೊಳ್ಳುತ್ತಿ ದ್ದಾರೆಯೇ, ಸಮಯಕ್ಕೆ ಸರಿಯಾಗಿ ಊಟ ನೀರು ಸಿಗುತ್ತಿದೆಯಾ ಎಂದು ವಲಸೆ ಕಾರ್ಮಿಕರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆದಷ್ಟು ಬೇಗ ನಮ್ಮ ಊರುಗಳಿಗೆ ತೆರಳಬೇಕು ಎಂದರು. ಲಾಕ್‌ಡೌನ್‌ ಸದ್ಯಕ್ಕೆ ತೆರವುಗೊಳಿಸುವುದಿಲ್ಲ. ಜನರು ಆದಷ್ಟು ಮನೆಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್‌. ಎನ್‌.ಸುಬ್ಟಾರೆಡ್ಡಿ, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ(ಚಿನ್ನಿ), ಜಿಲ್ಲಾಧಿಕಾರಿ ಆರ್‌.ಲತಾ, ಸಿಇಒ ಫೌಝೀಯಾ ತರುನ್ನಮ್‌, ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌, ತಹಶೀಲ್ದಾರ್‌ ಎಂ.ನಾಗರಾಜು, ಇಒ ಮಂಜುನಾಥ್‌ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಪ್ರತಾಪ್‌, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next