Advertisement
ಈ ಕುರಿತು ಸುದೀಪ್ ತಮ್ಮ ಅಭಿಮಾನಿಗಳಿಗೆ ಮಂಗಳವಾರ ಒಂದು ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ನಿರ್ಧಾರವನ್ನು ಅಭಿಮಾನಿಗಳು ಗೌರವಿಸುತ್ತಾರೆ ಎಂದು ನಂಬಿರುವುದಾಗಿ ಹೇಳಿಕೊಂಡಿದ್ದಾರೆ. ಸುದೀಪ್ ಬರೆದಿರುವ ಪತ್ರದ ಸಾರಂಶ ಇಲ್ಲಿದೆ …
ಪ್ರತಿ ವರ್ಷ ನೀವೆಲ್ಲಾ ನನ್ನ ಹುಟ್ಟುಹಬ್ಬಕ್ಕೆ ಬಂದು ನನ್ನನ್ನು ಹಾರೈಸುವಾಗ ಬಹಳ ಖುಷಿಯಾಗುತಿತ್ತು. ನನ್ನ ಹುಟ್ಟುಹಬ್ಬವನ್ನು, ನಿಮ್ಮ ಹುಟ್ಟುಹಬ್ಬದಷ್ಟೇ ಸಂಭ್ರಮದಿಂದ ಆಚರಿಸುವುದನ್ನು ನೋಡಿ ಖುಷಿಯಾಗುತ್ತಿದ್ದು. ಸುಮಾರು ಎರಡು ದಶಕಗಳಿಂದ, ನೀವು ನನಗೆ ತೋರಿಸುತ್ತಿರುವ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಪ್ರೀತಿ ಬೆಲೆ ಕಟ್ಟಲಾಗದ್ದು ಮತ್ತು ನಾನು ಏನು ಮಾಡಿದರೂ ಆ ಪ್ರೀತಿಯ ಋಣವನ್ನು ತೀರಿಸುವುದಕ್ಕೆ ಸಾಧ್ಯವೇ ಇಲ್ಲ. ಕಳೆದ ಹಲವು ವರ್ಷಗಳಿಂದ ನಾನು ಒಂದು ವಿಷಯವನ್ನು ಗಮನಿಸುತ್ತಾ ಬಂದಿದ್ದೇನೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ, ಅಭಿಮಾನಿಗಳು ತಾವು ಕಷ್ಟಪಟ್ಟು ದುಡಿದ ಹಣವನ್ನು ದೊಡ್ಡ ಹಾರಗಳು ಮತ್ತು ಕೇಕ್ ಮೇಲ್ ಖರ್ಚು ಮಾಡುವುದನ್ನು ನೋಡಿದ್ದೇನೆ. ಎಷ್ಟೇ ಜನ ನೂರಾರು ಮೈಲಿಯಿಂದ ಬೆಂಗಳೂರಿಗೆ ಬಂದು, ನನ್ನನ್ನು ಹಾರೈಸುವುದನ್ನು ನೋಡಿದ್ದೇನೆ. ನನ್ನ ಮನೆ, ರೋಡು, ಸುತ್ತಮುತ್ತಲ ಪರಿಸರವನ್ನು ಅಲಂಕಾರ ಮಾಡುವುದನ್ನು ನೋಡಿದ್ದೇನೆ.
Related Articles
Advertisement
ಇದಕ್ಕಿಂದ ಚೆನ್ನಾಗಿ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಸಾಧ್ಯವಿಲ್ಲ. ಈ ಮೂಲಕ ನಮ್ಮ ಸುತ್ತಮುತ್ತ ಇರುವ ಜನರಿಗೂ ನಾವು ಅಲ್ಪಸ್ವಲ್ಪ ಸಹಾಯ ಮಾಡಿದಂತಾಗುತ್ತದೆ. ಇನ್ನು ಮುಂದೆ ನಾನು ಹುಟ್ಟುಹಬ್ಬವನ್ನು ಆಚರಿಸಬಾರದೆಂದು ತೀರ್ಮಾನಿಸಿರುವುದಷ್ಟೇ ಅಲ್ಲ, ನನ್ನ ಹುಟ್ಟುಹಬ್ಬದ ದಿನ ನಾನು ಮನೆಯಲ್ಲೂ ಇರುವುದಿಲ್ಲ. ಈಗ ನಾನು ನಿಮಗೆ ಏನು ಮನವಿ ಮಾಡಿದ್ದೀನೋ, ಆ ದಿನ ನಾನು ಸಹ ನಾಲ್ಕು ಜನಕ್ಕೆ ಉಪಯೋಗುವಾಗುವಂತಹ ಕೆಲಸ ಮಾಡಬೇಕು ಎಂಬುದು ನನ್ನ ಇಚ್ಛೆ.
ನೀವೆಲ್ಲರೂ ನನ್ನ ಈ ಒಂದು ಮನವಿಯನ್ನು ಪುರಸ್ಕರಿಸುತ್ತೀರಾ ಮತ್ತು ಗೌರವಿಸುತ್ತಾರಾ ಎಂದು ನಂಬಿದ್ದೇನೆ. ಅಂದು, ನಮ್ಮೆಲ್ಲರ ಸಮಯವನ್ನು, ಒಂದಿಷ್ಟು ಜನ ಮುಖದಲ್ಲಿ ಸ್ಮೈಲ್ ತರುವುದಕ್ಕೆ ಶ್ರಮಿಸೋಣ. ನಿಮ್ಮ ಸುತ್ತಮುತ್ತಲಲ್ಲಿ ಯಾರಿಗಾದರೂ ಸಹಾಯದ ಅಗತ್ಯವಿದ್ದಲ್ಲಿ, ಅವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡಿ.-ಪ್ರೀತಿಯಿಂದ ಸುದೀಪ್