ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಮೈಸೂರಿನಲ್ಲಿ ಶೂಟಿಂಗ್ ನಿರತರಾಗಿದ್ದ ನಟ ಸುದೀಪ್ ಅವರು ಜೆ.ಪಿ.ನಗರದ ನಿವಾಸಕ್ಕೆ ಮರಳಿದ್ದಾರೆ.
ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ 3 ನಿನಿಮಾಗಳ ಬಜೆಟ್ ಕುರಿತಾಗಿ ಇರಬಹುದು,ವಿಲನ್, ಕೆಜಿಎಫ್ ಮತ್ತು ನಟ ಸಾರ್ವಭೌಮ ಚಿತ್ರ ಗಳ ಬಜೆಟ್ ಕುರಿತಾಗಿ ಬಂದಿರಬಹುದು ಎಂದರು.
ನಿರ್ಮಾಪಕರು ವಿತರಕರ ಕಡೆಯಿಂದ ಆಗಿರಬಹುದು. ವೈಯಕ್ತಿಕ ವಿಚಾರಗಳಿಗಾಗಿ ಆಗಿಲ್ಲ. ಐಟಿಗೆ ಅದರದ್ದೇ ಆದ ನೀತಿಗಳಿರುತ್ತವೆ ಎಂದರು.
ತಾಯಿ ಒಬ್ಬರೇ ಮನೆಯಲ್ಲಿದ್ದರು ಹಾಗಾಗಿ ಆತಂಕದಿಂದ ಮನೆಗೆ ಬಂದೆ ಎಂದಿದ್ದಾರೆ.
ಗುರುವಾರ ಬೆಳಗ್ಗೆ ಸ್ಯಾಂಡಲ್‌ವುಡ್ ಇತಿಹಾಸದಲ್ಲೆ ಮೊದಲು ಎನ್ನುವ ಹಾಗೆ ಏಕ ಕಾಲಕ್ಕೆ ಐಟಿ ಅಧಿಕಾರಿಗಳು ನಾಲ್ವರು ದಿಗ್ಗಜ ನಟರು ಮತ್ತು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ನಾಲ್ವರು ನಿರ್ಮಾಪಕರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಖ್ಯಾತ ನಟ ಶಿವರಾಜ್ ಕುಮಾರ್,ನಟ ಪುನೀತ್ ರಾಜ್‌ಕುಮಾರ್,ಕಿಚ್ಚ ಸುದೀಪ್, ಯಶ್, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಜಯಣ್ಣ, ಎಂಎಲ್‌ಸಿ ಸಿ.ಆರ್ ಮನೋಹರ್, ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರು ಸೇರಿ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆದಿದೆ.