Advertisement

ಅಭಿಮಾನಿಗಳ ಜೊತೆ ಸುದೀಪ್‌ ಬರ್ತ್‌ಡೇ ಸಂಭ್ರಮ

11:23 AM Sep 03, 2018 | Team Udayavani |

ನಟ ಸುದೀಪ್‌ ಭಾನುವಾರ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಳೆದ ವರ್ಷ ನಾನು ಮುಂದಿನ ದಿನಗಳಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದರು.

Advertisement

ಆದರೆ, ಅಭಿಮಾನಿಗಳ ಪ್ರೀತಿಗೆ ಮಣಿದು, ಸರಳವಾಗಿಯೇ ಅವರು ತಮ್ಮ ಜನ್ಮದಿನವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಯಾರೂ ಹಣ ಖರ್ಚು ಮಾಡಬಾರದು, ಹಾರ, ಕೇಕ್‌ ಏನೂ ಇಲ್ಲದೆ ಪ್ರೀತಿಯಿಂದ ಬಂದು ಶುಭಾಶಯ ಹೇಳಬೇಕು ಎಂದು ಮನವಿ ಮಾಡಿದ್ದರು.

ಅದರಂತೆ, ಸುದೀಪ್‌ ಅಭಿಮಾನಿಗಳು ಪ್ರೀತಿಯಿಂದಲೇ ಅವರ ಮನೆಗೆ ತೆರಳಿ, ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಜೊತೆಗೆ ಕೈ ಕುಲುಕಿ ತಮ್ಮ ಪ್ರೀತಿಯ ನಾಯಕನೊಂದಿಗೆ ಸೆಲ್ಫಿà ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದಲೂ ಶನಿವಾರ ಮಧ್ಯರಾತ್ರಿಯೇ ಸುದೀಪ್‌ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ಶುಭಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next