Advertisement

ಮತ್ತೆ ಲಾರ್ಡ್ಸ್‌ನತ್ತ ಸುದೀಪ್‌!

10:23 AM Jul 23, 2017 | |

ಮೊನ್ನೆ ಮೊನ್ನೆಯಷ್ಟೇ ಶಿವರಾಜಕುಮಾರ್‌ “ದಿ ವಿಲನ್‌’ ಚಿತ್ರೀಕರಣಕ್ಕಾಗಿ ಲಂಡನ್‌ಗೆ ತೆರಳಿದ್ದು ನಿಮಗೆ ಗೊತ್ತೇ ಇದೆ. ಈಗ ಚಿತ್ರೀಕರಣವೇ ಮುಗಿದು ಹೋಗಿದೆ. ನಿರ್ದೇಶಕ ಪ್ರೇಮ್‌ ಲಂಡನ್‌ ಶೆಡ್ನೂಲ್‌ ಅನ್ನು ಬೇಗನೇ ಮುಗಿಸಿಬಿಟ್ಟಿದ್ದಾರೆ. ಲಂಡನ್‌ನಲ್ಲಿ ನಡೆದ ಚಿತ್ರೀಕರಣದಲ್ಲಿ ಶಿವರಾಜಕುಮಾರ್‌, ಸುದೀಪ್‌ ಹಾಗೂ ಆ್ಯಮಿ ಜಾಕ್ಸನ್‌ ಪಾಲ್ಗೊಂಡಿದ್ದಾರೆ.

Advertisement

ಸದ್ಯ ಚಿತ್ರೀಕರಣ ಮುಗಿಸಿದ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಲಿದೆ. ವಾಪಾಸ್‌ ಬರುವ ಮುನ್ನ ಅದ್ಭುತ ಕ್ಷಣವೊಂದನ್ನು ಕಣ್ತುಂಬಿಕೊಂಡು ಬರಲು ನಿರ್ಧರಿಸಿದೆ. ಅದು ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ವೀಕ್ಷಿಸಲಿದೆ. ಹೌದು, ಇಂದು ಲಾರ್ಡ್ಸ್‌ ಮೈದಾನದಲ್ಲಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯವನ್ನು ವೀಕ್ಷಿಸಿಯೇ ವಾಪಾಸ್‌ ಆಗಲು “ದಿ ವಿಲನ್‌’ ತಂಡ ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಸುದೀಪ್‌ ಕೂಡಾ ಟ್ವೀಟ್‌ ಮಾಡಿದ್ದಾರೆ.

“ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ಗೆ ಸಾಕ್ಷಿಯಾಗಲು ಎಕ್ಸೆ„ಟ್‌ ಆಗಿದ್ದೇನೆ. ಹೆಮ್ಮೆಯ ಕ್ಷಣಗಳನ್ನು ಮಿಸ್‌ ಮಾಡಿಕೊಳ್ಳಲ್ಲ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಅಂದಹಾಗೆ, ತಿಂಗಳ ಹಿಂದೆಯಷ್ಟೇ ಸುದೀಪ್‌ ಲಾರ್ಡ್ಸ್‌ನಲ್ಲಿ ಕ್ರಿಕೆಟ್‌ ಆಡಿಬಂದಿದ್ದರು.  ಅಂದಹಾಗೆ, ಲಂಡನ್‌ಗೆ  ಶಿವರಾಜಕುಮಾರ್‌, ಗೀತಾ ಶಿವರಾಜ ಕುಮಾರ್‌, ಪುತ್ರಿ ಅನುಪಮಾ, ರಕ್ಷಿತಾ ಪ್ರೇಮ್‌, ಪುತ್ರ ಸೂರ್ಯ ಕೂಡಾ ತೆರಳಿದ್ದರು.  

ಬೆಂಗಳೂರಿನಲ್ಲಿ ಆರಂಭವಾದ “ದಿ ವಿಲನ್‌’ ಚಿತ್ರೀಕರಣ ನಂತರದ ದಿನಗಳಲ್ಲಿ ಶಿವಮೊಗ್ಗ, ಬೆಳಗಾವಿ ಹಾಗೂ ಇತ್ತೀಚೆಗೆ ಬ್ಯಾಂಕಾಕ್‌ನಲ್ಲೂ ನಡೆದಿತ್ತು. ಬ್ಯಾಂಕಾಕ್‌ನಿಂದ ಬಂದ ತಂಡ ಲಂಡನ್‌ಗೆ ತೆರಳಿ ಈಗ ಅಲ್ಲೂ ಚಿತ್ರೀಕರಣ ಮುಗಿಸಿದೆ. ಚಿತ್ರದ ವಿದೇಶಿ ಭಾಗದ ಚಿತ್ರೀಕರಣ ಮುಗಿದಿದ್ದು, ಮುಂದಿನ ದಿನಗಳಲ್ಲಿ ಲೇಹ್‌, ಲಡಾಕ್‌ನಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next