Advertisement

ಅಂಗಡಿಗಳ ಮೇಲೆ ದಿಢೀರ್‌ ದಾಳಿ

02:14 PM Jul 27, 2019 | Team Udayavani |

ಶಿರಹಟ್ಟಿ: ತಹಶೀಲ್ದಾರ್‌ ಯಲ್ಲಪ್ಪ ಗೋಣೆಪ್ಪನವರ ನೇತೃತ್ವದ ತಾಲೂಕು ತಂಬಾಕು ನಿಯಂತ್ರಣ ತಂಡದಿಂದ ಪಟ್ಟಣದ ಅಂಗಡಿಗಳ ಮೇಲೆ ದಿಢೀರ್‌ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆಪ್ಪನವರ ಮಾತನಾಡಿ, ಈ ಮೊದಲೇ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ತಿಳಿವಳಿಕೆ ನೀಡಲಾಗಿತ್ತು. ಆದರೆ ಕಾಯ್ದೆ ಪಾಲನೆ ಮಾಡದಿದ್ದ ಕಾರಣ ಕಾನೂನು ರೀತಿ ಕ್ರಮ ಕೈಗೊಂಡು 3400 ರೂ. ದಂಡ ವಿಧಿಸಿ ಅರಿವು ಮೂಡಿಸಲಾಗುತ್ತಿದೆ. ಇದೇ ರೀತಿ ಪುನರಾವರ್ತನೆಗೊಂಡಲ್ಲಿ ಅಂಗಡಿಗಳ ಪರವಾನಗಿ ರದ್ದು ಪಡಿಸುವುದಾಗಿ ತಿಳಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಮಾತನಾಡಿ, ಅಂಗಡಿ ಮುಂಗ್ಗಟ್ಟು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ.

18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ನಿಷೇಧ ಎಂಬ ಅಧಿಕೃತ ನಾಮಫಲಕ ಕಡ್ಡಾಯವಾಗಿ ಬಿತ್ತರಿಸುವುದು ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಬಾರದು. ಶಾಲಾ-ಕಾಲೇಜು ಆವರಣದದಿಂದ 100 ಗಜದ ಒಳಗಡೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ ಶೇ. 85ರಷ್ಟು ಆರೋಗ್ಯ ಎಚ್ಚರಿಕೆ ಚಿತ್ರ ಮುದ್ರಿಸಿದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದರು.

ಎಎಸ್‌ಐ ಎಂ.ಎಂ. ಕಲಹಾಳಮಠ, ಈಸಿಓ ವಿ.ಬಿ. ಸವಣೂರ, ಆರೋಗ್ಯ ಇಲಾಖೆಯಿಂದ ಗೀತಾ ಎಂ.ಎಚ್., ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು, ಮಹೇಶ ಎಫ್‌. ಗುಡ್ಡದವರ, ಶಿವಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next