Advertisement
ನಗರದಲ್ಲಿರುವ ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಎಂದೇ ಖ್ಯಾತಿ ಪಡೆದಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವೆÂತ್ಯಾಸ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದವು. ಅಲ್ಲದೆ, ವಿಶೇಷವಾಗಿ ತೂಕ ಮತ್ತು ಅಳತೆ ವಿಚಾರದಲ್ಲಿ ಪದೇ ಪದೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇದೆಲ್ಲವನ್ನೂ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿದ್ದೂ ಉಂಟು. ಇದನ್ನು ಗಮನದಲ್ಲಿಟ್ಟುಕೊಂಡು ಮೌಖೀಕ ದೂರಿನ ಮೇರೆಗೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.
Related Articles
Advertisement
ದಾಳಿ ವೇಳೆ ಡೆಫ್ಯೂಟಿ ಕಂಟ್ರೋಲರ್ ಮಂಜುನಾಥ್, ಜಿಲ್ಲಾ ಅಧಿಕಾರಿ ಲೋಕೇಶ್, ರಾಮನಗರ ಜಿಲ್ಲಾ ಕಾನೂನು ಮಾಪನ ಇಲಾಖೆ ಸ್ಕ್ವಾಡ್ ಮೂವರು ಸೇರಿದಂತೆ 60 ಮಂದಿ ಅಧಿಕಾರಿ ಸಿಬ್ಬಂದಿ ಇದ್ದರು.
ಅಳತೆ ಮತ್ತು ತೂಕದಲ್ಲಿ ರೈತರಿಗೆ ಅನ್ಯಾಯವಾಗಬಾರದು. ಜೊತೆಗೆ ಮಾಪನ ಇಲಾಖೆಯಿಂದ ಪ್ರತಿವರ್ಷ ಅದನ್ನು ಮಾಪನ ಮಾಡಿಸಿ ಸೀಲ್ ಹಾಕಿಸ ಬೇಕು. ಆಗಿದ್ದರೂ, ಒಮ್ಮೊಮ್ಮೆ ಅಳತೆ ಮೋಸ ನಡೆಯುವ ದೂರು ಕೇಳಿ ಬರು ತ್ತವೆ. ಅದಕ್ಕಾಗಿ ದಾಳಿ ನಡೆದಿದೆ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದ ಉಚಿತವಾಗಿ ಒಂದು ಸ್ಕೇಲ್ ಕೊಡುತ್ತೇವೆ ಯಾವುದೇ ರೈತರಿಗೆ ಅನುಮಾನ ಬಂದರೆ ಎರಡೂ ಸ್ಕೇಲ್‌ಗಳಲ್ಲಿ ಚೆಕ್ ಮಾಡಿಸಿಕೊಳ್ಳಬಹುದು. –ಡಾ. ರಾಜೇಂದ್ರ ಪ್ರಸಾದ್, ಕಂಟ್ರೋಲರ್ ಕಾನೂನು ಮಾಪನ ಇಲಾಖೆ
ನಿರಂತರವಾಗಿ ತೂಕ ಮತ್ತು ಅಳತೆಯಲ್ಲಿ ವಂಚನೆಯಾಗುತ್ತಲೇ ಬರುತ್ತಿತ್ತು. ಯಾವ ಸಿಸಿ ಕ್ಯಾಮೆರಾಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು, ಇದೀಗ ಅಳತೆ ಮತ್ತು ಮಾಪನ ಇಲಾಖೆ ವತಿಯಿಂದ ಅಧಿಕಾರಿಗಳು ದಾಳಿ ಮಾಡಿದ್ದು ಮೆಚ್ಚುವಂತದ್ದು. ಅವರಿಗೆ ನಮ್ಮ ಧನ್ಯವಾದ ಸಲ್ಲಿಸುತ್ತೇವೆ. – ಶಿವಣ್ಣ, ರೇಷ್ಮೇ ಬೆಳೆಗಾರರು