Advertisement
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಮಧ್ಯಾಹ್ನ ಕೆಎಸ್‌ಆರ್‌ಪಿ ಹಾಗೂ ವಿವಿಧ ಠಾಣೆಗಳ ಅಧಿಕಾರಿ, ಸಿಬಂದಿ ಸುಮಾರು ಒಂದೂವರೆ ತಾಸು ತಪಾಸಣೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, “ಇಂಥ ದಿಢೀರ್ ಭೇಟಿಯನ್ನು ಆಗಿಂದಾಗ್ಗೆ ಮಾಡಲಾಗುವುದು. ತಪಾಸಣೆ ವೇಳೆ ಬೀಡಿ, ಸಿಗರೇಟು, ತಂಬಾಕು ಪತ್ತೆಯಾಗಿದೆ. ಮಾದಕ ವಸ್ತು ಅಥವಾ ಬೇರೆ ವಸ್ತುಗಳು ಸಿಕ್ಕಿಲ್ಲ. ಕೈದಿಗಳು ಮೊಬೈಲ್ ಕರೆ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಕಾರಾಗೃಹದಲ್ಲಿ ಕೆಎಸ್‌ಐಎಸ್ ಎಫ್(ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ಹಾಗೂ ಕಾರಾಗೃಹ ಅಧಿಕಾರಿಗಳು ನಿರಂತರ ವಾಗಿ ಸಮರ್ಪಕವಾಗಿ ತಪಾಸಣೆ ನಡೆಸುತ್ತಿದ್ದಾರೆ. ಕಾರಾಗೃಹ ಅಧೀಕ್ಷಕ ರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾರಾಗೃಹದಲ್ಲಿ ರವಿವಾರ 400 ಪುರುಷರು, 8 ಮಹಿಳೆಯರು ಸಹಿತ ಒಟ್ಟು 408 ಮಂದಿ ವಿಚಾರಣಾಧೀನ ಕೈದಿಗಳಿದ್ದರು.