Advertisement

ಇಂಟರ್‌ನೆಟ್‌ ಡಾಟಾ ಬಳಕೆ ಹಠಾತ್‌ ವೃದ್ಧಿ

12:03 PM Apr 12, 2020 | Sriram |

ಉಡುಪಿ: ಕೋವಿಡ್ 19 ಹಾವಳಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಆಗಿ 15 ದಿನಗಳು ಕಳೆದಿವೆ. ಇನ್ನಷ್ಟು ದಿನ ವಿಸ್ತರ
ಣೆಯೂ ಆಗುವ ಮುನ್ಸೂಚನೆ ಸರಕಾರದಿಂದ ಹೊರಬಿದ್ದಿದೆ. ಇದರಿಂದಾಗಿ ಮನೆಗಳಲ್ಲಿ ಇಂಟರ್‌ನೆಟ್‌ ಬಳಸಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿಗೆ ಆಗಿದೆ.ಲಾಕ್‌ಡೌನ್‌ ಘೋಷಣೆಗೂ ಮುನ್ನ ಮಹಾನಗರಗಳಲ್ಲಿ “ವರ್ಕ್‌ ಫ್ರಮ್ ಹೋಮ್‌’ ಕಲ್ಪನೆ ಜಾರಿಯಾಗಿತ್ತು. ಕಚೇರಿಗಳಲ್ಲಿ ಬಂದರೆ ಜನ ಸಂಪರ್ಕ ಜಾಸ್ತಿಯಾಗುತ್ತದೆಂದು ಆಧುನಿಕ ತಾಂತ್ರಿಕತೆ ಬಳಸಿ ಮನೆಗಳಲ್ಲಿ ಕೆಲಸ ಮಾಡಲು ಆರಂಭವಾಯಿತು. ಕ್ರಮೇಣ ಮಹಾನಗರಗಳು ಮಾತ್ರವಲ್ಲದೆ ಸಾಮಾನ್ಯ ಪಟ್ಟಣಗಳಲ್ಲಿಯೂ ವರ್ಕ್‌ ಫ್ರಮ್ ಹೋಮ್‌ ಸಾಧ್ಯವಾಗುತ್ತಿದೆ.

Advertisement

ಸಾಮಾನ್ಯ ಹಳ್ಳಿಗಳಲ್ಲಿಯೂ ಲ್ಯಾಪ್‌ಟಾಪ್‌ ಮತ್ತು ಇಂಟರ್‌ನೆಟ್‌ ಬಳಸಿ ಕೆಲಸ ಮಾಡಲು ಈಗ ಸಾಧ್ಯ. ಬೆಂಗಳೂರು, ಮುಂಬಯಿಯಂತಹ ಮಹಾನಗರಗಳ ನಿವಾಸಿಗಳು ಹಳ್ಳಿಗಳಿಗೆ ಬಂದು ವರ್ಕ್‌ ಫ್ರಮ್ ಹೋಮ್‌ ಮಾಡುತ್ತಿದ್ದಾರೆ. ಇದರಿಂದ ಒಮ್ಮೆಲೆ ಅಂತರ್ಜಾಲ ಸಂಪರ್ಕಗಳ ಸಂಖ್ಯೆ ಜಾಸ್ತಿ ಆಗಿದೆ. ಒಂದು ಕಚೇರಿಯಲ್ಲಿ ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುವವರು ಈಗ ಮನೆಗಳಲ್ಲೇ ಕುಳಿತು ಲ್ಯಾಪ್‌ಟಾಪ್‌ಗ್ಳಲ್ಲಿ ಕೆಲಸ ಮಾಡುವಾಗ ಇಂಟರ್‌ನೆಟ್‌ ಡಾಟಾ ಬಳಕೆ ಜಾಸ್ತಿಯಾಗುತ್ತಿದೆ. ಹೊಸ ಸಂಪರ್ಕಗಳು ಗಣನೀಯವಾಗಿ ಏರಿಕೆ ಆಗದಿದ್ದರೂ ಡಾಟಾ ಬಳಕೆ ಏಕಾಏಕಿ ವೃದ್ಧಿಸಿದೆ. ಹಿಂದೆ ಇಂಟರ್‌ನೆಟ್‌ ಸಂಪರ್ಕವಿದ್ದರೂ ಡಾಟಾ ಬಳಕೆ ಇಷ್ಟು

ಪ್ರಮಾಣದಲ್ಲಿ ಇರಲಿಲ್ಲ.
ಇಂಟರ್‌ನೆಟ್‌ ಬಳಕೆ ಜಾಸ್ತಿಯಾಗಲು ಇನ್ನೊಂದು ಕಾರಣ ಎಲ್ಲ ಕಾಲೇಜುಗಳಲ್ಲಿ ರಜೆ ಸಾರಿರುವುದು. ವಿದ್ಯಾರ್ಥಿಗಳೀಗ ಗರಿಷ್ಠ ಸಮಯ ಇಂಟರ್‌ನೆಟ್‌ ಬಳಸುತ್ತಿದ್ದಾರೆ. ಇಲ್ಲವಾದರೆ ಇವರು ಹಗಲು ಹೊತ್ತಿನಲ್ಲಿ ತರಗತಿ ಕೋಣೆಯಲ್ಲಿರುತ್ತಿದ್ದರು. ಈಗ ಎಂಜಿನಿಯರಿಂಗ್‌ ಮತ್ತು ಕೆಲವು ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳೂ ನಡೆಯುವ ಕಾರಣ ಇಂಟರ್‌ನೆಟ್‌ ಬಳಕೆ ಜಾಸ್ತಿಯಾಗಿದೆ.

ಬಿಎಸ್ಸೆನ್ನೆಲ್‌ನಲ್ಲಿ ಅಪ್‌ಲಿಂಕ್‌ ಪೋರ್ಟ್‌ ಗಳಲ್ಲಿ ಶೇ. 50ರಷ್ಟು ಇದ್ದ ಲೋಡಿಂಗ್‌ ಈಗ ಒಮ್ಮೆಲೇ ಶೇ. 90ಕ್ಕೇರಿದೆ. ಏರ್‌ಟೆಲ್‌ನಂತಹ ಖಾಸಗಿ ಕಂಪೆನಿಗಳಲ್ಲಿಯೂ ಇಂಟರ್‌ನೆಟ್‌ ಬಳಕೆ ಜಾಸ್ತಿಯಾಗಿದೆ. ಇಂಟರ್‌ನೆಟ್‌ ಬಳಕೆ ಜಾಸ್ತಿಯಾದ ಕಾರಣ ಸಂಪರ್ಕದ ವೇಗ ಕಡಿಮೆಯಾಗುತ್ತಿದೆ. ಲಾಕ್‌ಡೌನ್‌ ಮುಗಿದರೂ ಮುಗಿಯದೇ ಇದ್ದರೂ ಇಂಟರ್‌ನೆಟ್‌ ಡಾಟಾ ಬಳಸುವ ಪ್ರವೃತ್ತಿ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.

ನಿರ್ವಹಿಸುತ್ತಿದ್ದೇವೆ
ಫೈಬರ್‌ ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿ ಅಪ್‌ಲಿಂಕ್‌ ಪೋರ್ಟ್‌ಗಳ ಲೋಡಿಂಗ್‌ ಶೇ. 50ನಿಂದ 90ಕ್ಕೇರಿದೆ. 50 ಎಂಬಿಪಿಎಸ್‌ ವೇಗವನ್ನು 40 ಎಂಬಿಪಿಎಸ್‌ಗೆ ಕಡಿಮೆ ಮಾಡಿ ನಿರ್ವಹಿಸುತ್ತಿದ್ದೇವೆ.
– ಪ್ರಮೋದ್‌ ಪಡಿಕ್ಕಲ್‌, ಸಬ್‌ಡಿವಿಜನಲ್‌ ಎಂಜಿನಿಯರ್‌, ಎನ್‌ಐಬಿ, ಬಿಎಸ್ಸೆನ್ನೆಲ್‌, ಮಂಗಳೂರು.

Advertisement

ಸಮಸ್ಯೆ ಆಗಿಲ್ಲ
ಹೊಸ ಸಂಪರ್ಕಗಳು ಜಾಸ್ತಿಯಾಗುತ್ತಿಲ್ಲ. ಆದರೆ ಡಾಟಾ ಬಳಕೆ ಪ್ರಮಾಣ ಹೆಚ್ಚಿಗೆಯಾಗಿದೆ. ನಾವು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ದಿನದ 24 ಗಂಟೆಯೂ ಗಮನ ಕೊಡುತ್ತಿರುವ ಕಾರಣ ಸ್ಪೀಡ್‌ ಸಮಸ್ಯೆ ಕಂಡುಬರುತ್ತಿಲ್ಲ.
– ಸದಾನಂದ, ಝೋನಲ್‌ ಬಿಸಿನೆಸ್‌ ಮೆನೇಜರ್‌, ಏರ್‌ಟೆಲ್‌, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next