Advertisement

ಕೋವಿಡ್ ತಡೆಗೆ ಸುದರ್ಶನ ಹೋಮ

08:03 AM Jul 28, 2020 | Suhan S |

ಮಾಗಡಿ: ಮಹಾಮಾರಿ ಕೋವಿಡ್ ಅಟ್ಟಹಾಸ ಸಂಪೂರ್ಣ ನಿರ್ಮೂಲನೆಗೆ ಸುದರ್ಶನ ಹೋಮ, ಪೂರ್ಣಾಹುತಿ ನೆರವೇರಿಸಲಾಗಿದೆ ಎಂದು ಜೆಡಿಎಸ್‌ ನಾಯಕ ಹಾಗೂ ಸಮಾಜ ಸೇವಕ ಕೆ.ಬಾಗೇಗೌಡ ತಿಳಿಸಿದರು.

Advertisement

ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಸೋಮೇಶ್ವರಸ್ವಾಮಿ ಮತ್ತು ಭ್ರಮರಾಂಭದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಮಾರಿ ಕೋವಿಡ್ ಸೋಂಕು ಸಂಪೂರ್ಣ ನಿರ್ಮೂಲನೆಗೆ ಸೋಮೇಶ್ವರಸ್ವಾಮಿಗೆ ಏಕವಾರ ರುದ್ರಾಭಿಷೇಕ, ಗಣಪತಿ ಹೋಮ, ದುರ್ಗಾ ಹೋಮ, ಧನ್ವಂತ್ರಿ ಹೋಮ, ಸುದರ್ಶನ ಹೋಮ ನೆರವೇರಿಸಲಾಗಿದೆ ಎಂದರು.

ನಾಗರಿಕರು ಕೋವಿಡ್ ಸೋಂಕಿಗೆ ಹೆದರಬೇಕಿಲ್ಲ, ಆತಂಕ ಪಡಬೇಕಿಲ್ಲ, ಭಾರತೀಯರಲ್ಲಿ ಕೊರೊನಾ ನಿರ್ಮೂಲನೆಗೆ ಮನೆಯಲ್ಲಿಯೇ ಮದ್ದಿದೆ. ಅದನ್ನು ಬಳಸಬೇಕಷ್ಟೆ. ಪಾರಂಪರಿಕವಾಗಿ ಬಂದಿರುವ ಸಂಪ್ರದಾಯವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಚ್ಛತೆಗೆ ಮೊದಲು ಆದ್ಯತೆ ಕೊಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ತಿಳಿಸಿದರು. ಅರ್ಚಕ ಕಿರಣ್‌ ದೀಕ್ಷಿತ್‌ ಧಾರ್ಮಿಕ ಕಾರ್ಯ ನಡೆಸಿಕೊಟ್ಟರು.

ಪುರಸಭಾ ಸದಸ್ಯರಾದ ಹೇಮಾವತಿ, ಎಂ.ಎನ್‌.ಮಂಜುನಾಥ್‌, ಮುಖಂಡರಾದ ಚುಟ್ಟನಹಳ್ಳಿ ಮಾರೇಗೌಡ, ಕಾಂತ ರಾಜು, ಗಜೇಂದ್ರ, ಅಯ್ಯಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಜಯಕುಮಾರ್‌, ರೂಪೇಶ್‌ಕುಮಾರ್‌, ಹನುಮಂತಯ್ಯ, ಗ್ರಾಪಂ ಸದಸ್ಯ ಶಿವರಾಜು, ಟಿ.ಕೆ. ರಾಮು, ಚಂದ್ರು, ಶಿವಕುಮಾರ್‌, ಶಿಕ್ಷಕ ರವಿಕುಮಾರ್‌, ವೆಂಕಟೇಶ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next