Advertisement
ಪ್ರಸಂಗದುದ್ದಕ್ಕೂ ಕುಣಿತ, ಅಭಿನಯ, ದೃಶ್ಯ ಸಂಯೋಜನೆ, ಮಾತುಗಾರಿಕೆ ಹಾಗೂ ಪಾತ್ರಗಳ ಆಹಾರ್ಯ ಇತ್ಯಾದಿಗಳು ಸಾಂಪ್ರದಾಯಿಕತೆಯ ಸೊಗಸು ಮತ್ತು ಆಧುನಿಕ ನಿರ್ದೇಶನದ ತಂತ್ರಗಳು ಕಣ್ಣು ಮತ್ತು ಮನಸ್ಸುಗಳಿಗೆ ಮುದ ನೀಡುವಂತೆ ಪರಸ್ಪರ ಸಾಂಗತ್ಯದಲ್ಲಿದ್ದವು. ಈ ಸಾಂಗತ್ಯವು ಚಂಡೆ ಮದ್ದಳೆಗಳ ನುಡಿತ ಹಾಗೂ ಪಾತ್ರಧಾರಿಗಳ ಕುಣಿತಗಳಲ್ಲಿಯೂ ವ್ಯಕ್ತವಾಗಿತ್ತು.
Related Articles
Advertisement
ಲಕ್ಷ್ಮೀ ಮತ್ತು ವಿಷ್ಣುವಿಗೆ ಪ್ರತ್ಯೇಕ ಒಡ್ಡೋಲಗ ನಿರ್ಮಾಣ ಮಾಡಿ ಲಕ್ಷ್ಮೀ ವಿಷ್ಣುವನ್ನು ಪುಷ್ಪಗಳಿಂದ ಆರಾಧಿಸುವ (ಅರ್ಧ ಇಳಿಸಿದ ಪರದೆಯ ಹಿಂದೆ) ದೃಶ್ಯ, ಯಕ್ಷಗಾನದಲ್ಲಿ ಹೇಗೆ ನಾವೀನ್ಯವನ್ನು ಸಾಧಿಸಬಹುದು ಎಂಬುದಕ್ಕೆ ದಿಕ್ಸೂಚಿಯಾಗಿತ್ತು.
ಅರ್ಥಗಾರಿಕೆಯ ಮಾತುಗಳ ಅರ್ಥಪುಷ್ಟಿಗೆ ಆಂಗಿಕ ಅಭಿನಯವನ್ನು ಜೊತೆಗೂಡಿಸುವ ಕೌಶಲ ಲಕ್ಷ್ಮೀ ಪಾತ್ರಧಾರಿ ಅಶ#ಕ್ ಹುಸೈನ್ ಅವರಲ್ಲಿ ಎದ್ದು ಕಾಣುತ್ತಿತ್ತು. ವಿಷ್ಣು ಪಾತ್ರಧಾರಿ ದೀವಿತ್ ಪೆರಾಡಿಯವರಲ್ಲಿ ಈ ಅಭಿನಯ ಶೈಲಿ ಸ್ಪುಟವಾಗಿತ್ತು. ಸುದರ್ಶನ ಪಾತ್ರಧಾರಿ ಶಿವರಾಜ್ ಬಜಕೂಡ್ಲು ಪರಿಣತ ವೃತ್ತಿ ನಿರತ ಕಲಾವಿದರಂತೆ ಪುಂಡುವೇಷದ ಎಲ್ಲ ವೈವಿಧ್ಯಗಳಿಂದ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸಿದರು. ದೇವೇಂದ್ರ ಪಾತ್ರಧಾರಿಯ (ಶ್ರೀಕಾಂತ ಎಂ. ಜಿ.) ನಿಧಾನಗತಿಯ ನಾಟ್ಯ ಆ ಪಾತ್ರಕ್ಕೆ ಉಚಿತವಾಗಿತ್ತು. ಸಾತ್ವಿಕ್ ನೆಲ್ಲಿತೀರ್ಥರ ಶತ್ರುಪ್ರಸೂದನ ಪಾತ್ರ ನಿರ್ವಹಣೆ ಸಾಂಪ್ರದಾಯಿಕ ಆಕರ್ಷಣೆಯಿಂದ ಕೂಡಿತ್ತು.
ಈ ಪ್ರಸಂಗದ ಒಂದು ಮುಖ್ಯ ಸಂದರ್ಭ ವಿಷ್ಣು, ಲಕ್ಷ್ಮೀ ಮತ್ತು ಸುದರ್ಶನದ ಸಂವಾದ ಭಾಗ. ಇಲ್ಲಿ ಅರ್ಥಗಾರಿಕೆ, ಅಭಿನಯ ಮತ್ತು ಕುಣಿತಗಳು ಉತ್ಕೃಷ್ಟ ಮಟ್ಟದಲ್ಲಿದ್ದವು. ವಿಷ್ಣುವಿನ ಪ್ರಾಸಬದ್ಧ ಮಾತುಗಾರಿಕೆ ಹಿರಿಯ ಕಲಾವಿದರ ಅನುಕರಣೆಯಂತೆ ತೋರಿದರೂ, “ಅನುಕರಣೆ’ಯನ್ನು ಬಿಟ್ಟು ‘ಅನುಸರಿಸು’ವ ಪ್ರಬುದ್ಧತೆ ಅಧ್ಯಯನದಿಂದ ಮತ್ತು ಅನುಭವದಿಂದ ಸಾಧಿತವಾಗಬೇಕು. ಆಗ ಸೃಜನಶೀಲತೆಯ ಸ್ವಂತಿಕೆಯ ಛಾಪು ಮೂಡಿಸಲು ಸಾಧ್ಯ.
ಮುಮ್ಮೇಳದ ಕಲಾವಿದರ ಸಾಮರ್ಥ್ಯಕ್ಕೆ ಬಹಳ ಎಚ್ಚರಿಕೆಯಿಂದ ಉತ್ತಮ ಪೋಷಣೆ ನೀಡಿದವರು ಭಾಗವತರಾದ ಶ್ರೀನಿವಾಸ ಬಳ್ಳಮಂಜ ಮತ್ತು ಚಂಡೆ, ಮದ್ದಳೆ, ಚಕ್ರತಾಳದ ಮಯೂರ್ ನಾಯ್ಕ್, ಸವಿನಯ ನೆಲ್ಲಿತೀರ್ಥ, ಕಾರ್ತಿಕ್ ಇನ್ನಂಜೆ ಹಾಗೂ ಆನಂದ ಸಾಣೂರು. ಆಟದ ಯಶಸ್ಸಿನಲ್ಲಿ ಇವರಿಗೂ ಮುಖ್ಯ ಪಾಲಿದೆ.
ಪ್ರೊ| ಎಂ. ಎಲ್ ಸಾಮಗ