Advertisement

ಸುಡಾನ್‌: ನಿಯಂತ್ರಣಕ್ಕೆ ಬಾರದ ಕೋವಿಡ್‌

11:22 AM Jun 23, 2020 | mahesh |

ಕರ್ಟೊಮ್‌: ವೈದ್ಯರಿಗಿಂತ ಅಧಿಕವಾಗಿ ಮಿಲಿಟರಿ ಜನರಲ್‌ಗ‌ಳಿರುವ ಸೌತ್‌ ಸುಡಾನ್‌ ದೇಶದಲ್ಲಿ ಈಗ ಮತ್ತೆ ಕೋವಿಡ್‌ ಹಾವಳಿ ನಿಯಂತ್ರಣಕ್ಕೆ ಬಾರದಂತಾಗಿದೆ. ಫೆಬ್ರವರಿ ತಿಂಗಳಲ್ಲಿ ಸೋಂಕು ಮೊದಲು ಇಲ್ಲಿ ಕಾಣಿಸಿಕೊಂಡಿದ್ದು, ಅನಂತರದಲ್ಲಿ ತೀವ್ರತೆ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಸೋಂಕು ಇಲ್ಲಿನ ಜನರಲ್ಲಿ ತಲ್ಲಣವನ್ನು ಹುಟ್ಟಿಸುತ್ತಿದೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ದೇಶದಲ್ಲಿ ಸೋಂಕಿತರಿಗೆ ಶೀಘ್ರ ಚಿಕಿತ್ಸೆ ನೀಡುವ ವ್ಯವಸ್ಥೆಗಳೂ ಇಲ್ಲ. ಇಲ್ಲಿ ಮೂಲ ಸೌಕರ್ಯಗಳು ಅತೀ ಕಡಿಮೆಯಿದ್ದು, ಸರಕಾರೇತರ ಸಂಸ್ಥೆಗಳು ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ಆದ್ದರಿಂದಲೇ ಈ ದೇಶ ಕೋವಿಡ್‌ ವಿರುದ್ಧ ಹೋರಾಡುವ ಸಾಧ್ಯತೆ ತೀರಾ ಕಡಿಮೆ.

Advertisement

ವಿಶ್ವ ಸಂಸ್ಥೆಯ ಮಾಹಿತಿಯ ಪ್ರಕಾರ ಸುಡಾನ್‌ನಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಈಗಾಗಲೇ ಇಲ್ಲಿ 1,900 ಸೋಂಕಿತರಿದ್ದು, ಅವರಲ್ಲಿ 50 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಈಗಾಗಲೇ 3 ಮಂದಿ ಮೃತಪಟ್ಟಿದ್ದು, ಸೋಂಕಿನ ಮೂಲವೂ ಪತ್ತೆಯಾಗುತ್ತಿಲ್ಲ. ಹೆಚ್ಚಿನ ಆರೋಗ್ಯ ಕಾರ್ಯಕರ್ತರೂ ಸೋಂಕಿಗೆ ಒಳಗಾಗಿರುವ ಶಂಕೆಯಿದೆ. ವೈದ್ಯರ ಮಾಹಿತಿಯ ಪ್ರಕಾರ ಸೋಂಕು ಯಾವ ಕ್ಷಣದಲ್ಲಿ ಬೇಕಾದರೂ ಸಾಮೂಹಿಕವಾಗಿ ಹರಡಬಹುದು. ಸೋಂಕು ಪತ್ತೆ ಪರಿಕರ, ಸುರಕ್ಷತಾ ಸಾಧನಗಳ ಕೊರತೆಯಿಂದ ಇಲ್ಲಿ ಹೆಚ್ಚು ಪರೀಕ್ಷೆ ಮಾಡುವ ವ್ಯವಸ್ಥೆಯಿಲ್ಲ. ಸೋಂಕು ಪತ್ತೆಗೆ ಕನಿಷ್ಠ ಒಂದು ವಾರದ ಅಗತ್ಯವಿದೆ. ಜನರಿಗೆ ರೋಗದ ತೀವ್ರತೆಯ ಬಗ್ಗೆ ಅರಿವಿದೆ. ಕಳೆದ ತಿಂಗಳಿನಲ್ಲಿ ಸರಕಾರ ಇಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಿತ್ತು. ಜನರಿಗೆ ರೋಗಕ್ಕಿಂತಲೂ ಹೆಚ್ಚಾಗಿ ಹಸಿವಿನ ಭಯವಿದೆ ಎಂದು ತಿಳಿದ ಮೇಲೆ ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳು ಆರಂಭವಾಗಿದ್ದವು.

ತೀರಾ ಹಿಂದುಳಿದ ಪ್ರದೇಶಗಳ್ಲಲೂ ಸೋಂಕು ಹರಡಲು ಆರಂಭವಾಗಿದ್ದು, ಇಲ್ಲಿನ ಜನರಿಗೆ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆಗಳಿಲ್ಲ. ಆಸ್ಪತ್ರೆಗಳು ಈಗಾಗಲೇ ತಮ್ಮಲ್ಲಿ ಬೆಡ್‌ಗಳು ಪೂರ್ತಿಯಾಗಿವೆ ಎಂದು ಹೇಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next