Advertisement
ಈಗಾಗಲೇ ಸಂಘರ್ಷದಲ್ಲಿ ಭಾರತೀ ಯರೊಬ್ಬರು ಮೃತಪಟ್ಟಿದ್ದು, ಕರ್ನಾಟಕ ಬುಡಕಟ್ಟು ಜನಾಂಗದ 31 ಮಂದಿಯ ಸಹಿತ ಹಲವಾರು ಭಾರತೀಯರು ಪ್ರದೇಶದಲ್ಲಿ ಸಿಲುಕಿದ್ದಾರೆ. ಆದರೆ ಯುದ್ಧ ಸಂದರ್ಭ ಹಿನ್ನೆಲೆ ಪ್ರಜೆಗಳ ಸ್ಥಳಾಂತರ ಸಾಧ್ಯವಿಲ್ಲದ ಕಾರಣ, ತತ್‌ಕ್ಷಣಕ್ಕೆ ಅಗತ್ಯವಿರುವ ಸ್ಥಳೀಯ ನೆರವು ನೀಡಲು ಭಾರತ ಸರಕಾರ ಮುಂದಾಗಿದೆ.
ಸೂಡಾನ್‌ನಲ್ಲಿ ಸಿಲುಕಿರುವ ಕರ್ನಾಟಕ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಮಂದಿಯನ್ನು ಮರಳಿ ಕರೆತರಲು ಮನವಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್, ಪರಿಸ್ಥಿತಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಕ್ಷೇಪ ವ್ಯಕ್ತಪಡಿಸಿ, ಜೈಶಂಕರ್ ಅವರನ್ನು ಬಹಳ ಹಿಂದಿನಿಂದ ನೋಡುತ್ತಿದ್ದೆ. ಆದರೆ ಅವರ ವರ್ತನೆ ಈಗ ಅಸಹ್ಯವೆನಿಸುತ್ತಿದೆ ಎಂದು ಟೀಕಿಸಿದ್ದಾರೆ.