Advertisement

ಸುಡಾನ್‌ ಘರ್ಷಣೆಯಲ್ಲಿ ಭಾರತೀಯ ಮೃತ್ಯು

11:52 PM Apr 16, 2023 | Team Udayavani |

ಖಾರ್ತೂಮ್‌/ಹೊಸದಿಲ್ಲಿ: ಸುಡಾನ್‌ನ ಸೇನೆ ಮತ್ತು ಬಲಿಷ್ಠ ಅರೆಸೇನಾ ಪಡೆಯ ನಡುವಿನ ಕಾದಾಟದಲ್ಲಿ ಅಮಾಯಕ ಭಾರತೀಯ ನಾಗರಿಕರೊಬ್ಬರು ಬಲಿಯಾಗಿದ್ದಾರೆ. ರಾಜಧಾನಿ ಖಾರ್ತೂಮ್‌ನಲ್ಲಿ ನಡೆದ ಭಾರೀ ಹಿಂಸಾಚಾರದ ವೇಳೆ ಸೇನೆ ಮತ್ತು ರ್ಯಾಪಿಡ್‌ ಸಪೋರ್ಟ್‌ ಫೋರ್ಸ್‌ ನಡುವಿನ ಗುಂಡಿನ ಕಾಳಗದಲ್ಲಿ ಅಕಸ್ಮಾತಾಗಿ ಗುಂಡು ತಗುಲಿ ಕೇರಳದ ಕಣ್ಣೂರಿನವರಾದ ಆಲ್ಬರ್ಟ್‌ ಆಗಸ್ಟೀನ್‌ ಅಸುನೀಗಿದ್ದಾರೆ.

Advertisement

ಆಲ್ಪರ್ಟ್‌ ಅವರು ಸುಡಾನ್‌ನ ದಾಲ್‌ ಗ್ರೂಪ್‌ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾವಿನ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಖಾರ್ತೋಮ್‌ನಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದ್ದು, ಸುಡಾನ್‌ನಲ್ಲಿನ ಬೆಳವಣಿಗೆಗಳ ಮೇಲೆ ಗಮನ ಹರಿಸಿದ್ದೇವೆ. ಆಲ್ಪರ್ಟ್‌ ಅವರ ಕುಟುಂಬದೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ ಎಂದಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಸುಡಾನ್‌ನ ಸೇನೆಯು ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಅಧಿಕಾರವನ್ನು ನಾಗರಿಕ ಸರಕಾರಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಶುರುವಾಗಿರುವ ವಿವಾದವು ಈಗ ಭಾರೀ ಸಂಘರ್ಷವಾಗಿ ಮಾರ್ಪಾಟಾಗಿದೆ.

ಭಾರತೀಯರಿಗೆ ಸಲಹೆ: ಶನಿವಾರವಷ್ಟೇ ಸುಡಾನ್‌ನಲ್ಲಿನ ಭಾರತೀಯರಿಗೆ ಸಂದೇಶ ರವಾನಿಸಿದ್ದ ಭಾರತೀಯ ರಾಯಭಾರ ಕಚೇರಿ, ಖಾರ್ತೋಮ್‌ನಲ್ಲಿ ದೊಡ್ಡಮಟ್ಟದ ಹಿಂಸಾಚಾರ ನಡೆ ಯುತ್ತಿರುವ ಕಾರಣ, ಯಾರೂ ಮನೆಗಳಿಂದ ಹೊರಬರಬೇಡಿ. ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next