Advertisement

ಸುಡಗಾಡ ಸಿದ್ಧರಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ

11:41 AM Dec 06, 2019 | Suhan S |

ಬೈಲಹೊಂಗಲ: ಪಟ್ಟಣದ ಇಂದಿರಾ ನಗರದ ಸಿದ್ಧರ ಕಾಲೋನಿಯಲ್ಲಿರುವ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂಧವರಿಗೆ ನಿವೇಶನ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಮಟ್ಟದ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಸೇವಾ ಸಂಘ ವತಿಯಿಂದ ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮುಖಂಡ ಮಾರುತಿ ಕೊಂಡೂರ ಮಾತನಾಡಿ, ಬಿಸಿಎಂ ಹಾಸ್ಟೇಲ್‌ ಹಿಂದೆ ಪುರಸಭೆಯ 178 ರಿ..ನಂ.ಗೈರಾನ ಜಾಗೆಯಲ್ಲಿ 35 ವರ್ಷಗಳಿಂದ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂಧವರು ವಾಸವಾಗಿದ್ದೇವೆ. ಇಲ್ಲಿಯವರೆಗೆ ಸರ್ಕಾರದ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಗುಡಾರ್‌, ಶೆಡ್‌ಗಳಲ್ಲಿ ವಾಸವಾಗಿದ್ದೇವೆ ಎಂದರು.

ಈ ಜನರಿಗೆ ಬೆಳಕಿನ, ಕುಡಿಯುವ ನೀರಿನ, ಬೀದಿದೀಪ, ರಸ್ತೆ ವ್ಯವಸ್ಥೆ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಾಜ ಬಾಂಧವರ ಸಂಕಷ್ಟಕ್ಕೆ ನೆರವಾಗಬೇಕು. ಕೂಡಲೇ ವಸತಿ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ವೇಳೆ ರಮೇಶ ಸಂಕಣ್ಣವರ, ಸಣ್ಣಮಲ್ಲಪ್ಪ ಡಕ್ಕನ್ನವರ, ಪಾಂಡುರಂಗ ಹಿಪ್ಪರಗಿ, ಬಾಳೇಶ ಡೊಂಕನ್ನವರ, ಕುಬೇರ ಕವಳೆ, ಸಾಯಿರಾಮ ಕವಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next