Advertisement

Dec.18: ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

09:46 AM Dec 12, 2023 | Team Udayavani |

ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಡಿ. 12 ರಿಂದ 23ರವರೆಗೆ ವಾರ್ಷಿಕ ಮಹೋತ್ಸವವು ಉಡುಪಿ ಪುತ್ತೂರು ವೇ|ಮೂ|ಹಯವದನ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ವಿಷ್ಣುಮೂರ್ತಿಭಟ್‌ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ.

Advertisement

ಡಿ.18 ರಂದು ಷಷ್ಠಿ ಮಹೋತ್ಸವ ಹಾಗೂ ಡಿ. 21 ರಂದು ಶ್ರೀಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ. 12 ರಂದು ಆರಂಭಗೊಳ್ಳಲಿದ್ದು, ಬೆಳಗ್ಗೆ ಪುಣ್ಯಾಹ, ಪಂಚವಿಂಶತಿ ಕಳಶ, ಕಲಶಾಭಿಷೇಕ, ಶ್ರೀ ದೇವರ ಗರ್ಭಗುಡಿಯ ಸುತ್ತುಪೌಳಿಯ ನೂತನ ಕಾಷ್ಠಾವೃತ(ದಳಿ) ಸಮರ್ಪಣೆ ನಡೆಯಲಿದೆ. ಡಿ.17ರಂದು ಧ್ವಜಾರೋಹಣ, ಬಲಿ, ಮಹಾಪೂಜೆ, ಸಂತರ್ಪಣೆ, ಡಿ 18ರಂದು ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿ, ಮಹಾಪೂಜೆ, ಷಷ್ಠಿ ಮಹೋತ್ಸವ, ರಥೋತ್ಸವ, ಮಹಾ ಅನ್ನಸಂತರ್ಪಣೆ, ರಾತ್ರಿ ರಥೋತ್ಸವ, ಭೂತ ಬಲಿ, ಡಿ.20 ರಂದು ಆಶ್ಲೇಷಾ ಬಲಿ, ಕಟ್ಟೆಪೂಜೆ, ಭೂತಬಲಿ, ಡಿ. 21 ರಂದು ಮಹಾಪೂಜೆ, ರಥಾರೋಹಣ, ಸಂತರ್ಪಣೆ, ರಾತ್ರಿ ಮಹಾರಥೋತ್ಸವ, ಡಿ. 22 ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಮತ್ತು ಜ.16 ರಂದು ಕಿರುಷಷ್ಠಿ ಉತ್ಸವ ಜರಗಲಿದೆ.

ಡಿ.12 ರಿಂದ 22ರವರೆಗೆ ವಿವಿಧ ತಂಡಗಳಿಂದ ಭಜನೆ, ತಾಳಮದ್ದಳೆ, ಯಕ್ಷಗಾನ, ನಾಟಕ ಮತ್ತಿತರ ಸಾಂಸðತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಅವರ ಪ್ರಕಟನೆ ತಿಳಿಸಿದೆ.

Advertisement

ಧಾರ್ಮಿಕ ಹಿನ್ನೆಲೆ

ಮುನಿವರೇಣ್ಯ ಭಾರ್ಗವ ಮಹರ್ಷಿಗಳು ಪ್ರತಿಷ್ಠಾಪಿಸಿದ ಶ್ರೀ ವಾಸುಕೀ ಸುಬ್ರಹ್ಮಣ್ಯನ ಸೂಡ ಕ್ಷೇತ್ರವು ತುಳುನಾಡಿನಲ್ಲಿ ಷಷ್ಠಿ ಉತ್ಸವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಶ್ರೀ ವಾಸುಕೀ ಸುಬ್ರಹ್ಮಣ್ಯನೊಂದಿಗೆ ಕ್ಷೇತ್ರ ರಕ್ಷಕರಾಗಿ ಪರಿವಾರ ನಾಗ ಮತ್ತು ಪಂಚದೈವ ಶಕ್ತಿಗಳು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ದಿವ್ಯ ಸಾನಿಧ್ಯವಾಗಿದೆ.

ತುಳುನಾಡಿನಲ್ಲಿ ಪ್ರತೀ ಕುಟುಂಬಕ್ಕೊಂದು ನಾಗ ಬನವಿದೆ. ಅಗೋಚರ ಸ್ಥಿತಿಯಲ್ಲಿರುವವರು ಸೂಡ ಕ್ಷೇತ್ರಕ್ಕೆ ಬಂದು ದೇವಾಲಯದಲ್ಲಿ ಕಲ್ಲು, ಹಾಲಿಟ್ಟು ತಮ್ಮ ಮೂಲ ನಾಗಬನವೆಂದು ಆರಾಧಿಸುತ್ತಿದ್ದಾರೆ. ಇಲ್ಲಿ ವಾಸುಕೀ ಸುಬ್ರಹ್ಮಣ್ಯನಿಗೆ ತುಲಾಭಾರ, ರಂಗಪೂಜೆ, ನಾಗಸಮಾರಾಧನೆ, ಮುಂತಾದ ಹರಕೆಗಳನ್ನು ತೀರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next