Advertisement
ಬೆಳ್ಮಣ್ ಶ್ರೀಧರ ಭಟ್ ಅವರಿಂದ ರಥೋತ್ಸವ ಬಲಿ ನಡೆಯಿತು. ದೇಗುಲದ ಧ್ವಜಸ್ಥಂಭ ಮತ್ತು ಒಳಪ್ರಾಕಾರವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ಡಿ. 21 ರಂದು ಶ್ರೀಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ, ಡಿ. 22 ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಮತ್ತು ಜ.16 ರಂದು ಕಿರುಷಷ್ಠಿ ಉತ್ಸವ ಜರಗಲಿದೆ.
ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ವಾಸುಕೀ ಸುಬ್ರಹ್ಮಣ್ಯನಿಗೆ ತುಲಾಭಾರ, ಎಡೆಸ್ನಾನ, ಪೊಡಿ ಮಡೆಸ್ನಾನ, ನಾಗಸಮಾರಾಧನೆ ಮುಂತಾದ ಹರಕೆಗಳನ್ನು ಸಲ್ಲಿಸಿದರು.
Related Articles
ವೇ|ಮೂ| ವಿಷ್ಣುಮೂರ್ತಿ ಭಟ್ ಸೂಡ ಅವರ ನೇತೃತ್ವದಲ್ಲಿ ಸೂಡ ಸುಬ್ರಹ್ಮಣ್ಯ ಭಟ್ ಅವರ ಸಹಕಾರದೊಂದಿಗೆ ಮಹಾ ಅನ್ನಸಂತರ್ಪಣೆಯ ಪಲ್ಲಪೂಜೆ ನೆರವೇರಿತು. ಅನ್ನಸಂತರ್ಪಣೆಯ ದಾನಿಗಳಾದ ಶಿರ್ವ ಪ್ರಕಾಶ್ ಶೆಟ್ಟಿ , ಸೂಡ ಸೇನೆರ ಬೆನ್ನಿ ದಿನೇಶ್ ಶೆಟ್ಟಿ ಮತ್ತು ಮುಲ್ಕಿಯ ಉದ್ಯಮಿ ಶರತ್ಸಾಲಿಯಾನ್ ಹಾಗೂ ಷಷ್ಠಿ ಮಹೋತ್ಸವದಂದು ವರ್ಷಂಪ್ರತಿ ದೇಗುಲದ ಹೂವಿನ ಅಲಂಕಾರ ನೆರವೇರಿಸುತ್ತಿರುವ ಬೆಳ್ಮಣ್ನ ಉದ್ಯಮಿ ಸೂಡ ಭಾಸ್ಕರ ಆಚಾರ್ಯ ಅವರನ್ನು ಶಿರ್ವ ಕೋಡು ಜಯಪಾಲ ಹೆಗ್ಡೆ ಸಮ್ಮಾನಿಸಿದರು. ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ದೇಗುಲ ಹಾಗೂ ರಥ ಸಾಗುವ ದಾರಿಯನ್ನು ವಿದ್ಯುದೀªಪಗಳಿಂದ ಅಲಂಕೃತಗೊಳಿಸಲಾಗಿತ್ತು.
Advertisement
ಪೊಲೀಸ್ ನಿಯೋಜನೆಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ದಿಲೀಪ್ ನೇತೃತ್ವದಲ್ಲಿ ಕಾರ್ಕಳ ನಗರ,ಗ್ರಾಮಾಂತರ, ಹೆಬ್ರಿ ಮತ್ತು ಅಜೆಕಾರು ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.ಸೂಡ ಬ್ರೈಟ್ ಗ್ರೂಪ್ ಫ್ರೆಂಡ್ಸ್ನ ಸದಸ್ಯರು ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಸೂಡ ಶ್ರೀನಿವಾಸ ಭಟ್,ಸೂಡ ಶ್ರೀಶ ಭಟ್,ಸೂಡ ಸುಬ್ರಹ್ಮಣ್ಯ ಭಟ್,ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ,ಶಿರ್ವ ಕೋಡು ಜಯಪ್ರಕಾಶ್ ಹೆಗ್ಡೆ, ದಿನೇಶ್ ಹೆಗ್ಡೆ, ಜಯಪಾಲ ಹೆಗ್ಡೆ, ಶ್ರೀನಾಥ ಹೆಗ್ಡೆ ಪಡುಬಿದ್ರಿ,ಡಾ| ಅಮರ್ ಹೆಗ್ಡೆ,ಅನೂಪ್ ಹೆಗ್ಡೆ, ವಿಜಯಲಕೀÒ$¾ ಎಸ್. ಶೆಟ್ಟಿ, ಪ್ರಶಾಂತ್ ಶೆಟ್ಟಿ ಸೂಡ, ಎಸ್.ಕೆ.ಸಾಲಿಯಾನ್ ಬೆಳ್ಮಣ್, ಹೇಮನಾಥ ಶೆಟ್ಟಿ ಸೂಡ , ಪಾಂಡುರಂಗ ಶೆಟ್ಟಿ ಬಾಕೂìರು, ಶಂಕರ ಕುಂದರ್ ಸೂಡ, ಸಾಯಿನಾಥ ಶೆಟ್ಟಿ ಕುತ್ಯಾರು,ಭಾಸ್ಕರ ಆಚಾರ್ಯ, ಸಚ್ಚಿದಾನಂದ ಪಾಂಡೆ ಮತ್ತಿತರ ಗಣ್ಯರು,ಭಕ್ತರು ಉಪಸ್ಥಿತರಿದ್ದರು.