Advertisement

ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

03:49 PM Apr 13, 2022 | Team Udayavani |

ಶಹಾಬಾದ: ನಗರದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷವು ಕೇಂದ್ರ ಬಿಜೆಪಿ ಸರ್ಕಾರದ ಅನಿಯಂತ್ರಿತ ಬೆಲೆ ಏರಿಕೆ ಖಂಡಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

Advertisement

ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಣಪತರಾವ್‌ ಮಾನೆ ಮಾತನಾಡಿ, ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಜನರು ತತ್ತರಿಸಿ ಹೋಗಿದ್ದಾರೆ. ಆದರೂ ಬಿಜೆಪಿ ಸರ್ಕಾರ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲಿಯಂ ವಸ್ತುಗಳ ಬೆಲೆಯೇರಿಕೆ ಬಗ್ಗೆ ಟೀಕಿಸಿದಾಗ, ಅದು ಜಾಗತಿಕ ದರಗಳ ಕಡೆಗೆ, ತೈಲ ಕಂಪನಿಗಳ ಕಡೆಗೆ ಕೈ ತೋರಿಸುತಿತ್ತು. ಆದರೆ ಚುನಾವಣೆಗಳ ಸಂದರ್ಭದಲ್ಲಿ ಬೆಲೆ ಏರಿಕೆ ಆಗದೇ ಇರುವುದನ್ನು ದೇಶದ ಜನತೆ ನೋಡಿದ್ದಾರೆ. ಬಿಜೆಪಿಯ ಕೇಂದ್ರ ಸರ್ಕಾರದ ನಯವಂಚನೆ ಜನರಿಗೆ ಅರ್ಥವಾಗುತ್ತಿದೆ. ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನೆಪ ಮಾಡಿ ಬೆಲೆಯೇರಿಕೆ ಮಾಡಲಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 135 ಡಾಲರ್‌ನಿಂದ 100 ಡಾಲರ್‌ಗೆ ಇಳಿದಿದೆ. ಡೀಸೆಲ್‌ ಸಗಟು ದರವನ್ನು ಲೀಟರ್‌ಗೆ 25ರೂ.ಗೆ ಏರಿಕೆ ಮಾಡಿರುವುದರಿಂದ ಸಾರಿಗೆ ಸಾಗಾಟದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಯುಸಿಐ ಕಮ್ಯುನಿಸ್ಟ್‌ ಸ್ಥಳಿಯ ಸಮಿತಿಯ ಸದಸ್ಯರಾದ ರಾಘವೇಂದ್ರ ಎಂ.ಜಿ ಮಾತನಾಡಿ, ಬಿಜೆಪಿ ಅಚ್ಛೆ ದಿನಗಳನ್ನು ತರುತ್ತೇನೆಂದು ಬಣ್ಣಬಣ್ಣದ ಮಾತುಗಳನ್ನಾಡುತ್ತಾ ಅಧಿಕಾರಕ್ಕೆ ಏರಿದ ದಿನದಿಂದಲೂ ನಿರಂತರವಾಗಿ ಜನವಿರೋಧಿ ನೀತಿಗಳನ್ನು ಒಂದಾದ ಮೇಲೋಂದರಂತೆ ತರುತ್ತಿದ್ದಾರೆ ಎಂದು ಆಪಾದಿಸಿದರು.

ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್‌. ಇಬ್ರಾಹಿಂಪುರ, ಜಗನ್ನಾಥ ಎಸ್‌.ಎಚ್‌ ಮಾತನಾಡಿದರು. ಪಕ್ಷದ ಸದಸ್ಯರಾದ ರಾಜೇಂದ್ರ ಅತನೂರ, ತುಳಜರಾಮ ಎನ್‌. ಕೆ, ನೀಲಕಂಠ ಎಂ.ಹುಲಿ, ರಮೇಶ ದೇವಕರ್‌, ಮಹಾದೇವಿ ಮಾನೆ, ಅಂಬಿಕಾ ಆರ್‌.ಜಿ, ಮಾಹದೇವಿ ಅತನೂರು, ಮಹಾದೇವ ಸ್ವಾಮಿ, ರಘು ಪವಾರ್‌, ಕಿರಣ ಜಿ. ಮಾನೆ, ಸುರೇಶ, ಅಜಯ, ಸ್ಫೂರ್ತಿ, ಆನಂದ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next