Advertisement

ಸುಚಿತ್ರ ಥಿಯೇಟರ್‌; ಇಂದು 3ಡಿ ಪ್ರದರ್ಶನಕ್ಕೆ ಚಾಲನೆ

03:25 AM Jun 15, 2018 | Karthik A |

ಮಹಾನಗರ: ಅತ್ಯಾಧುನಿಕ ಸೌಕರ್ಯಗಳೊಂದಿಗೆ ಈಗಾಗಲೇ ಚಿತ್ರಪ್ರೇಮಿಗಳ ಮನಸ್ಸು ಗೆದ್ದ ನಗರದ ಕೆ.ಎಸ್‌. ರಾವ್‌ ರಸ್ತೆಯ ‘ಸುಚಿತ್ರ’ ಥಿಯೇಟರ್‌ ಇದೀಗ 3ಡಿ ಸೌಕರ್ಯದೊಂದಿಗೆ ಮತ್ತೂಂದು ಬದಲಾವಣೆಗೆ ತೆರೆದುಕೊಂಡಿದೆ. ಮಂಗಳೂರಿನ ಸಿಂಗಲ್‌ ಥಿಯೇಟರ್‌ ಗಳ ಪೈಕಿ ಪ್ರಥಮ ಬಾರಿಗೆ 3ಡಿ ಸೌಕರ್ಯವನ್ನು ಸುಚಿತ್ರ ಅಳವಡಿಸಿದ್ದು, ಜೂ. 15ರಿಂದ ಪ್ರದರ್ಶನ ಆರಂಭಿಸಲಿದೆ.

Advertisement

ಅತ್ಯಾಧುನಿಕ ಸೌಕರ್ಯಗಳಿರುವ ಸುಚಿತ್ರ ಥಿಯೇಟರ್‌ನಲ್ಲಿ ‘ತ್ರಿಬಲ್‌ ಬಿಮ್‌ 3ಡಿ’ ಸೌಲಭ್ಯವನ್ನು ನೀಡಲಾಗಿದೆ. ಇದಕ್ಕೆ ಹೈಜೆನ್‌ ಸಿಲ್ವರ್‌ ಸ್ಕೀನ್‌ ಕೂಡ ಅಳವ ಡಿಸಲಾಗಿದೆ. ಈ ಮೂಲಕ 3ಡಿ ಸಿನೆಮಾವನ್ನು ಇನ್ನು ಮುಂದೆ ಸುಚಿತ್ರದಂತಹ ಸಿಂಗಲ್‌ ಥಿಯೇಟರ್‌ನಲ್ಲೂ ವೀಕ್ಷಿಸಬಹುದಾಗಿದೆ. ಜಿಲ್ಲೆಯ ಯಾವುದೇ ಸಿಂಗಲ್‌ ಥಿಯೇಟರ್‌ನಲ್ಲಿ ಇಲ್ಲದಂತಹ ಹವಾ ನಿಯಂತ್ರಿತ ವ್ಯವಸ್ಥೆಯೊಂದಿಗೆ (ಎಸಿ)ಆಧುನಿಕ ಶೈಲಿಯ ಸೌಂಡ್‌ ಸಿಸ್ಟಂ, 4ಕೆ ಮಾದರಿಯ ಡಿಜಿಟಲ್‌ ಪ್ರೊಜೆಕ್ಟ್ ಸಹಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಸುಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ಕರಾವಳಿಯ ಸಿನೆಮಾ ಥಿಯೇಟರ್‌ ಗಳ ಪಾಲಿಗೆ ಹೊಸ ಅನುಭವವಾಗಿತ್ತು. 64 ಚಾನೆಲ್‌ Dolby Atmos ಸಿಸ್ಟಂನಲ್ಲಿ ಸುಚಿತ್ರ ಈಗಾಗಲೇ ಸಿನೆಮಾ ಪ್ರೇಮಿಗಳಿಗೆ ರಸದೌತಣ ನೀಡುತ್ತಿದೆ. ಇದರಿಂದಾಗಿ ತೆರೆಯ ಮೇಲೆ ಕಾಣುವ ಪ್ರತೀ ಸಿನೆಮಾದ ಸೌಂಡ್‌ ವೀಕ್ಷಕರಿಗೆ ರೋಚಕ ಅನುಭವ ನೀಡಲಿದೆ. ಈ ಚಿತ್ರಮಂದಿರದ ನವೀಕರಣದ ಕೆಲಸವನ್ನು ಕಳೆದ ಜೂನ್‌ ನಿಂದ ಆರಂಭಿಸಲಾಗಿದ್ದು, ಇತ್ತೀಚೆಗೆ ಚಿತ್ರ ಪ್ರದರ್ಶನ ಆರಂಭವಾಗಿತ್ತು.

ಭಾರತದಲ್ಲಿ ಮೊದಲ ಬಾರಿಗೆ 2012 ರಲ್ಲಿ Dolby Atmos ಸ್ಕ್ರೀನ್‌ ವ್ಯವಸ್ಥೆ ಜಾರಿಗೆ ಬಂದಿದೆ. ದೇಶದ ಸುಮಾರು 400 ಸ್ಕ್ರೀನ್‌ಗಳಲ್ಲಿ ಈಗಾಗಲೇ ಇದೇ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಿನೆಮಾ ಪ್ರದರ್ಶನಗೊಳ್ಳುವಾಗ ಥಿಯೇಟರ್‌ನ ನಾಲ್ಕೂ ಮೂಲೆಗಳಲ್ಲಿ ಪ್ರೇಕ್ಷಕನ ಕಿವಿಗೆ ಸಮರ್ಪಕವಾಗಿ ಸ್ವರ ಕೇಳುವ ರೀತಿಯಲ್ಲಿ ಥಿಯೇಟರ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಸುಚಿತ್ರದಲ್ಲಿ ಇಂತಹ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. 

ಸುಚಿತ್ರ ಥಿಯೇಟರ್‌ನ ಬಾಲ್ಕನಿಯಲ್ಲಿ 272 ಹಾಗೂ ಕೆಳಗಡೆ 534 ಸೀಟು ವ್ಯವಸ್ಥೆ ಇದ್ದು, ಎಲ್ಲ  ಸೀಟುಗಳನ್ನು ಹೊಸದಾಗಿ ಸುಸಜ್ಜಿತ ರೀತಿಯಲ್ಲಿ ಜೋಡಿಸಲಾಗಿದೆ. ಟಿಕೆಟ್‌ ದರವನ್ನು ಪ್ರಸ್ತುತ ದರಕ್ಕಿಂತ ಸ್ವಲ್ಪ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಮುಂದೆ 100 ರೂ. ಹಾಗೂ 150 ರೂ. ಎಂದು ನಿಗದಿಪಡಿಸಲು ಚಿಂತಿಸಲಾಗಿದೆ. ಮಲ್ಟಿಪ್ಲೆಕ್ಸ್‌ ಸಿನೆಮಾದ ಟಿಕೆಟ್‌ ಗಳನ್ನು ಆನ್‌ ಲೈನ್‌ (ಬುಕ್‌ ಮೈ ಶೋ) ಮೂಲಕ ಪಡೆಯುವ ರೀತಿಯ ಲ್ಲಿಯೇ ಸುಚಿತ್ರ ಥಿಯೇಟರ್‌ ನ ಟಿಕೆಟ್‌ಗಳು ದೊರೆಯುತ್ತಿದೆ. ಥಿಯೇ ಟರ್‌ನ ಒಳಗಡೆಯ ಕ್ಯಾಂಟೀನ್‌ ವ್ಯವಸ್ಥೆ ಯಲ್ಲೂ ಸುಧಾರಣೆಯಾಗಲಿವೆೆ. ಸುಚಿತ್ರಾ ಥಿಯೇಟರ್‌ ಆಧುನಿಕ ಶೈಲಿಗೆ ಬದಲಾವಣೆಗೊಂಡಂತೆ, ಅದರ ಪಕ್ಕದಲ್ಲೇ ಇರುವ ಪ್ರಭಾತ್‌ ಥಿಯೇಟರ್‌ ಕೂಡ ಈಗ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ. ಇಲ್ಲೂ ಕೂಡ ಅತ್ಯಾಧುನಿಕ ಪ್ರಾಜೆಕ್ಟ್, ಸೌಂಡ್‌ ಸಿಸ್ಟಂ, ಹವಾನಿಯಂತ್ರಿತ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳ ಜೋಡಣೆಯಾಗುತ್ತಿದೆ.

1976ರಿಂದ ಚಿತ್ರ ಪ್ರದರ್ಶನ ಆರಂಭ
ಕೆ.ಎಸ್‌. ರಾವ್‌ ರಸ್ತೆಯ ಪ್ರಭಾತ್‌ ಚಿತ್ರಮಂದಿರದ ಸಮೀಪದಲ್ಲಿರುವ ವಿಸ್ತಾರದ ಆವರಣವನ್ನು 1970ರಲ್ಲಿ ಸ್ವಾಧೀನಪಡಿಸಿಕೊಂಡ ಬೆಂಗಳೂರಿನ ಡಿ.ಎನ್‌.ಗೋಪಾಲಕೃಷ್ಣರು, ಅವರ ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್‌ ನ ಸಂಸ್ಥೆಯ ಹೆಸರಿನಲ್ಲಿ ‘ಪ್ರಭಾತ್‌’ ಚಿತ್ರಮಂದಿರದ ಆವರಣದಲ್ಲಿ ‘ಸುಚಿತ್ರಾ’ ಎಂಬ ಹೆಸರಿನ ಇನ್ನೊಂದು ಚಿತ್ರಮಂದಿರ ಸ್ಥಾಪಿಸಿದರು. 1976ನೇ ಮೇ ತಿಂಗಳಿನಲ್ಲಿ ಡಾ| ರಾಜ್‌ಕುಮಾರ್‌ರ ‘ಬಹದ್ದೂರ್‌ ಗಂಡು’ ಎಂಬ ಕನ್ನಡ ಚಿತ್ರದ ಮೂಲಕ ಪ್ರದರ್ಶನ ಆರಂಭಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next