ಮುಂಬಯಿ: ಬಾಲಿವುಡ್ ಹಾಗೂ ಸೌತ್ ನಟಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಚಿತ್ರರಂಗದಿಂದ ಒಂದಷ್ಟು ಬ್ರೇಕ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಯೂರೋಪ್ ಪ್ರವಾಸ ಮಾಡಿದ್ದಾರೆ.
ಜರ್ಮನಿಯ ಬರ್ಲಿನ್‌ನಲ್ಲಿ ಆಯೋಜನೆಗೊಳ್ಳುವ ಬೆತ್ತಲೆ ಪಾರ್ಟಿಯಲ್ಲಿ ಅನೇಕರು ಭಾಗಿಯಾಗುತ್ತಾರೆ. ಸೆಲೆಬ್ರಿಟಿಗಳು ಸೇರಿದಂತೆ ನೂರಾರು ಮಂದಿ ಪಾಸಿಟಿವಿಟಿ ಪಾರ್ಟಿ ಎಂದು ಕರೆಯಲ್ಪಡುವ ಬೆತ್ತಲೆ ಪಾರ್ಟಿಯಲ್ಲಿ ನಟಿ ಸುಚಿತ್ರಾ ಕೃಷ್ಣಮೂರ್ತಿ ಪಾಲ್ಗೊಂಡಿದ್ದಾರೆ.
ಈ ಪಾರ್ಟಿ ಹೇಗೆ ನಡೆಯುತ್ತದೆನ್ನುವ ಕುತೂಹಲದಿಂದ ಅವರು ಇದರಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಅವರ ಅನುಭವನ್ನು ʼಎಕ್ಸ್ʼ ನಲ್ಲಿ ಅವರು ಬರೆದುಕೊಂಡಿದ್ದಾರೆ.
“ಬರ್ಲಿನ್‌ನಲ್ಲಿನ ಬಾಡಿ ಪಾಸಿಟಿವಿಟಿ. ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡೆ. ಇದರಲ್ಲಿ ಭಾಗಿಯಾದ ಬಳಿಕ ನನಗೆ ಒಂದು ಮಾತು ನೆನಪಾಯಿತು. ನಿಮ್ಮ ಮೆದುಳು ಕಾರ್ಯನಿರ್ವಹಿಸದಷ್ಟು ಒಪನ್ ಮೈಂಡೆಡ್ ಆಗಿರಬೇಡಿ. ನಾನು ಎಂದೆಂದಿಗೂ ದೇಸಿ ಹುಡುಗಿ. ನನಗೆ ಸ್ನಾನ ಮತ್ತು ಗಾಯತ್ರಿ ಮಂತ್ರ ಪಠಣ ಬೇಕು” ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ʼಬಾಲಿವುಡ್ ಹಂಗಾಮʼ ಜೊತೆ ಮಾತನಾಡಿರುವ ಅವರು, ಇಂತಹ ವಿಷಯಗಳು ಇಲ್ಲಿ ತುಂಬಾ ಸಾಮಾನ್ಯವಾಗಿದೆ. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶ. ಹಾಗಾಗಿ ಇದೇನೆಂದು ನೋಡೋಣವೆಂದು ಅಲ್ಲಿಗೆ ಹೋಗಿದ್ದೆ. ನನ್ನ ಸ್ನೇಹಿತನಿಗೆ ಸೇರಿದ ಬಾರ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ನನ್ನನ್ನು ಅತಿಥಿ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ನಾನು ಅಲ್ಲಿಗೆ ಹೋಗಿದ್ದೆ. ಆದರೆ ಹೋದ ಸ್ವಲ್ಪ ಸಮಯದಲ್ಲೇ ನಾನು ಅಲ್ಲಿಂದ ಓಡೋಡಿ ಬಂದೆ. ನಾನು ತುಂಬಾ ದೇಸಿ, ಅಲ್ಲಿ ನನಗೆ ಇತರರ ಖಾಸಗಿ ಅಂಗ ನೋಡಬೇಕಿಲ್ಲ. ಅದಕ್ಕಾಗಿ ನಾನು ಹೊರಬಂದೆ. ಅದನ್ನಲ್ಲಿ ಅಶ್ಲೀಲವಾಗಿ ನೋಡುವುದಿಲ್ಲ. ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಆದರೆ ಭಾರತದಲ್ಲಿ ಬೆಳೆದ ನಮಗೆ ಅದು ಸೂಕ್ತವಾಗಲ್ಲ” ಎಂದು ನಟಿ ಹೇಳಿದ್ದಾರೆ.