Advertisement
– ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಕಮ್ ನಟ “ಡಾರ್ಲಿಂಗ್’ ಕೃಷ್ಣ. ಅವರು ಹೇಳಿದ್ದು, “ಲವ್ ಮಾಕ್ಟೇಲ್’ ಯಶಸ್ಸಿನ ಬಗ್ಗೆ. ಹೌದು, ಈ ಚಿತ್ರ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲ, ಮೊದಲ ವಾರದ ಐದು ದಿನ ಗಳಿಕೆಯೇ ಇಲ್ಲದೆ 130 ಚಿತ್ರಮಂದಿರಗಳಲ್ಲಿದ್ದ ಚಿತ್ರ ಕೇವಲ ಒಂದೇ ಚಿತ್ರಮಂದಿರಕ್ಕೆ ಬಂದು ನಿಂತಿತ್ತು. ಅಲ್ಲಿಂದ ಶುರುವಾದ ಸಿನಿಮಾ ಪ್ರದರ್ಶನ ಮೂರು ದಿನದಲ್ಲಿ 14 ಮಾಲ್‌ಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಆ ಸಂಭ್ರಮ ಹಂಚಿಕೊಳ್ಳಲೆಂದೇ ಕೃಷ್ಣ ಟೀಮ್ ಜೊತೆ ಬಂದಿದ್ದರು.
Related Articles
Advertisement
ಎಷ್ಟೋ ಜನ ಗಂಡ ಹೆಂಡತಿ ಜಗಳ ಮಾಡಿಕೊಂಡರೆ, “ಲವ್ ಮಾಕ್ಟೇಲ್’ ನೋಡಿ ಸರಿ ಹೋಗ್ತಿàರಾ ಅಂತಿದ್ದಾರೆ. ಇನ್ನು, ಶೈನ್‌ಶೆಟ್ಟಿ ಸಿನಿಮಾ ನೋಡಿ, “ನನಗೆ ಚಿತ್ರದೊಳಗಿರುವ ನಿಧಿ ಥರ ಹೆಂಡ್ತಿ ಸಿಗಬೇಕು’ ಅಂದಿದ್ದಾರೆ. ಸದ್ಯಕ್ಕೆ ಚಿತ್ರ ಚೆನ್ನಾಗಿ ಹೋಗುತ್ತಿದೆ. ಕನ್ನಡಿಗರಿಗೆ ಧನ್ಯವಾದ’ ಎಂದರು ಕೃಷ್ಣ.
ಮಿಲನಾ ನಾಗರಾಜ್ ಕೂಡ ಖುಷಿಯಲ್ಲಿದ್ದರು. “ಒಳ್ಳೆಯ ಚಿತ್ರಕ್ಕೆ ಬೆಂಬಲವೇ ಇಲ್ಲವಲ್ಲ ಅಂತ ಬೇಸರವಿತ್ತು. ಅದಕ್ಕೆ ಸರಿಯಾಗಿ ಚಿತ್ರಮಂದಿರಗಳಿಂದಲೂ ಚಿತ್ರ ಹೋಗುತ್ತಿದೆ ಎಂಬ ಫೀಲ್ ಇತ್ತು. ಆದರೂ, ಕೃಷ್ಣ ನಂಬಿಕೆ ಕಳೆದುಕೊಳ್ಳಲಿಲ್ಲ. ಒಂದು ಚಿತ್ರಮಂದಿರದಿಂದಲೇ ಚಿತ್ರ ಗೆಲ್ಲುತ್ತೆ ನೋಡು ಅಂದರು. ಅದು ಹಾಗೆಯೇ ಆಗಿದೆ. ಇಷ್ಟಕ್ಕೆಲ್ಲಾ ಕನ್ನಡಿಗರು, ಮಾಧ್ಯಮ, ಪತ್ರಕರ್ತರು ಕಾರಣ’ ಎಂದರು ಮಿಲನಾ.
ನಿರ್ಮಾಪಕ ನಾಗಪ್ಪ ಅವರು, “ನಾವೀಗ ಸೋತು ಗೆದ್ದಿದ್ದೇವೆ. ಒಳ್ಳೆಯ ಸಿನಿಮಾಗೆ ಜನ ಕೈ ಬಿಡಲ್ಲ ಎಂಬುದು ಸಾಬೀತಾಗಿದೆ ಎಂದರು. ಯುವ ನಟ ಅಭಿಲಾಶ್, ಈ ಚಿತ್ರದ ಮೂಲಕ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಕನ್ನಡಿಗರಿಗೆ ಸಲಾಂ ಎಂದರು. ಕ್ರೇಜಿಮೈಂಡ್ ಶ್ರೀ ಕೂಡ ಗೆಲುವಿನ ಸಂಭ್ರಮ ಹಂಚಿಕೊಂಡರು.