Advertisement

ಇಂಥ ಕಳಪೆ ಸರಕಾರ ಕಂಡಿರಲಿಲ್ಲ

01:47 AM Apr 21, 2019 | Team Udayavani |

“”ಇಲ್ಲಿಯವರೆಗೂ ಈ ದೇಶ ಇಂಥ ಕಳಪೆ ಪ್ರಧಾನಿಯನ್ನಾಗಲೀ, ಕಳಪೆ ಸರಕಾರವನ್ನಾಗಲೀ ಕಂಡಿರಲಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಕೇರಳದ ವಯನಾಡ್‌ನ‌ಲ್ಲಿ ಸಹೋದರ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪರ ಪ್ರಚಾರ ನಡೆಸಿದ ಅವರು, ಪುಲ್ಪಲ್ಲೆಯಲ್ಲಿ ನಡೆದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದರು.

Advertisement

“”ಸರಕಾರದ ಆಡಳಿತ ಲೋಪಗಳನ್ನು ಖಂಡಿಸಿದ ವರನ್ನು ರಾಷ್ಟ್ರದ್ರೋಹಿಗಳೆಂದು ಕರೆಯ ಲಾ  ಗುತ್ತಿದೆ. ಸಂವಿಧಾನಾತ್ಮಕ ಸಂಸ್ಥೆಗಳ ಶಕ್ತಿ ಕುಂದಿ ಸ ಲಾಗುತ್ತಿದೆ. ತಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಉದ್ದೇಶದಿಂದ ಬರಿಗಾಲದಲ್ಲಿ ನಡೆದು ಬಂದ ಸಾವಿ ರಾರು ರೈತರ ಮನವಿಯನ್ನು ಕೇಳುವ ಸೌಜನ್ಯ ಈ ಸರಕಾರಕ್ಕಿಲ್ಲ” ಎಂದು ಆರೋಪಿಸಿದರು.

ಇದೇ ವೇಳೆ, “”ಇಂಥ ಸರಕಾರವನ್ನು ಎದುರಿಸುತ್ತಿ ರುವ ರಾಹುಲ್‌ ಗಾಂಧಿ, ತಮ್ಮ ತಂದೆ (ರಾಜೀವ್‌ ಗಾಂಧಿ), ತಾಯಿ (ಸೋನಿಯಾ ಗಾಂಧಿ)ಯವರನ್ನು ಕಳ್ಳರು ಎಂದು ಕರೆದ ಪಕ್ಷದ ನಾಯಕರನ್ನು ಆಲಂಗಿಸಿ ಔದಾರ್ಯ ಮೆರೆದಿದ್ದಾರೆ” ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ರಿಗೆ ಅವಮಾನ ಮಾಡಿದವರ ಪರ ಬಿಎಸ್ಪಿ ನಾಯಕಿ ಮಾಯಾವತಿ ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂಬುದಕ್ಕೆ ಇದು ಸಾಕ್ಷಿ.
ಯೋಗಿ ಆದಿತ್ಯನಾಥ್‌,ಉ.ಪ್ರ.ಸಿಎಂ

ಬಹಿರಂಗವಾಗಿಯೇ “ಹಿಂದೂ ಭಯೋತ್ಪಾದನೆ’ ಎಂಬ ಪದ ಬಳಕೆ ಮಾಡಿದ್ದ ಆರ್‌.ಕೆ.ಸಿಂಗ್‌ ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್‌ ನೀಡಿದ್ದಲ್ಲದೆ, ಕೇಂದ್ರ ಸಚಿವ ಸ್ಥಾನವನ್ನೂ ನೀಡಲಿಲ್ಲವೇ? ಇದಕ್ಕೇನಂತೀರಿ?
ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ನಾಯಕ

Advertisement

ನನ್ನ ಕೈ ಹಿಡಿದುಕೊಂಡೇ ರಾಜಕೀಯಕ್ಕೆ ಬಂದೆ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, ಈಗ ಪ್ರಧಾನಿ ಮೋದಿ ಅವರು ನನಗೆ ಏನು ಮಾಡುತ್ತಾರೋ ಎಂಬ ಭಯ ನನ್ನನ್ನು ಕಾಡುತ್ತಿದೆ.
ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

ಪ್ರಧಾನಿ ಮೋದಿ ಸರಕಾರ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳ ಹಿತಕ್ಕಾಗಿ ಬಲಿಕೊಡುತ್ತಾ ನಿಜವಾದ ರಾಷ್ಟ್ರದ್ರೋಹಿ ಆಗಿದ್ದಾರೆ. ಮತ ಪಡೆಯಲು ಹುಸಿ ರಾಷ್ಟ್ರ ವಾದದ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ.
ನವಜೋತ್‌ ಸಿಧು, ಕಾಂಗ್ರೆಸ್‌ ನಾಯಕ

ಯುವಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪುನರಾಯ್ಕೆ ಆಗುವುದು ಬೇಕಿದೆ. ದೇಶವನ್ನು ಸದೃಢಗೊಳಿಸುವ ಕೆಲಸ ಮೋದಿಯಿಂದ ಮಾತ್ರ ಸಾಧ್ಯ ಎಂದು ಅವರಿಗೆ ತಿಳಿದಿದೆ.
ತ್ರಿವೇಂದ್ರ ಸಿಂಗ್‌ ರಾವತ್‌, ಉತ್ತರಾಖಂಡ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next