Advertisement

ಮೂಡುಬಿದಿರೆ ಮೈಟ್‌ನಲ್ಲಿ ಯಶಸ್ವೀ ಟೆಡ್‌ಎಕ್ಸ್‌  ಮೈಟ್‌

12:30 AM Feb 28, 2019 | |

ಮಂಗಳೂರು: ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆಶ್ರಯದಲ್ಲಿ (ಮೈಟ್‌) ಫೆ. 23ರಂದು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಟೆಡ್‌ಎಕ್ಸ್‌ ಮೈಟ್‌ ಕಾರ್ಯಕ್ರಮ ಯಶಸ್ವಿಯಾಗಿ ಎರಡನೆಯ ಬಾರಿಗೆ ಜರಗಿತು. ರಾಜಲಕ್ಷ್ಮೀ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್‌ ಚೌಟ ಉದ್ಘಾಟಿಸಿದರು. ಅನಂತಗಳ ಶೋಧ ಎಂಬುದು ಆಶಯವಾಗಿತ್ತು.

Advertisement

ದಿ ನ್ಯೂ ಡಾನ್‌ ಎಂಬ ವಿಷಯದ ಮೊದಲ ಹಂತದಲ್ಲಿ ದೀಪಕ್‌ ಲಾಲನ್‌ ಬ್ಲಾಕ್‌ಚೈನ್‌ ಟೆಕ್ನಾಲಜಿ ಬಗ್ಗೆ ಉಪನ್ಯಾಸವಿತ್ತರು. ಈ ತಾಂತ್ರಿಕತೆಯಿಂದ ಆಧಾರ್‌ ಕಾರ್ಡ್‌ ಉಲ್ಲೇಖೀಸಿ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೊಹಮ್ಮದ್‌ ಸಮೀರ್‌ ಹೋಮಿಯೋಪಥಿ ಬಗ್ಗೆ ವಿವರ ನೀಡಿದರು. ಬಾಲಿವುಡ್‌ ಗಾಯಕ ಅಮಿ ಮಿಶ್ರಾ ಚಿತ್ರಗೀತೆಗಳಿಂದ ರಂಜಿಸಿದರು. ಮನೇಶ್‌ಕುಮಾರ್‌ ಅಪರಿಮಿತ ಉದ್ಯೋಗಿ ಎಂಬ ಬಗ್ಗೆ ಮಾತನಾಡಿದರು. 

ಲಿಗ್ನೆ„ಟ್‌ ಎಂಬ ಎರಡನೆಯ ಹಂತದಲ್ಲಿ ಹಾಸ್ಯ ಕಲಾವಿದ ಮನೋಜ್‌ ಪ್ರಭಾಕರ್‌ ಹಾಸ್ಯ ಕಾರ್ಯಕ್ರಮ ನೀಡಿದರು. ಉದ್ಯಮಶೀಲತೆಯ ಬಗ್ಗೆ ಶ್ರೀವತ್ಸ ಪ್ರಭಾಕರ್‌ ಮಾತನಾಡಿದರು. ಕಿರಣ್‌ ಜೆ. ಅವರು ಯಶಸ್ಸಿನ ಬಗ್ಗೆ ಮತ್ತು ಛಾಯಾಚಿತ್ರಗ್ರಾಹಕ ಅರುಣ್‌ ಹೆಗ್ಡೆ ಸ್ವಾನುಭವ ನಿರೂಪಿಸಿದರು. ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ವಿಶೇಷ ಉಪನ್ಯಾಸವಿತ್ತರು. ಮುಂಬಯಿ ಮೂಲದ ತಂಡದಿಂದ ನೃತ್ಯ ಕಾರ್ಯಕ್ರಮವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next