Advertisement

ಮಹಿಳಾ ಇಲಾಖೆಯಿಂದ ಯಶಸ್ವಿ ಫೋನ್‌ಇನ್‌ ಕಾರ್ಯಕ್ರಮ

02:02 PM May 31, 2019 | Team Udayavani |

ಕೋಲಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮೊದಲ ಬಾರಿಗೆ ಆಯೋಜಿಸಿದ್ದ ಫೋನ್‌ಇನ್‌ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರಿಂದ ಒಟ್ಟು 18 ದೂರುಗಳು ಬಂದಿವೆ ಎಂದು ಇಲಾಖೆಯ ಉಪನಿರ್ದೇಶಕಿ ಎಂ.ಸೌಮ್ಯ ತಿಳಿಸಿದರು.

Advertisement

ಗುರುವಾರ ನಗರದ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ ದೂರುಗಳಿಗೆ ಕೂಡಲೇ ಸ್ಪಂದಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

ಸ್ಪಂದನೆ: ಉಪನಿರ್ದೇಶಕರನ್ನು ಭೇಟಿಯಾಗಲು ಅನೇಕರಿಗೆ ಕಷ್ಟವಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳು ಇರುವವರು ಸಹ ಹೇಳಿಕೊಳ್ಳಲು ಸಾಧ್ಯವಾಗದರೆ

ತೊಂದರೆ ಪಡುತ್ತಿದ್ದು, ಅಂತಹವರ ಅನುಕೂಲಕ್ಕಾಗಿ ಫೋನ್‌ ಇನ್‌ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ದೊರೆತಿರುವುದಾಗಿ ಹೇಳಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರಿಂದ ನಾನಾ ದೂರುಗಳು ಕೇಳಿಬಂದವು ಎಂದರು.

ಬಾಲ್ಯ ವಿವಾಹದ ಬಳಿಕ ಯಾವ ರೀತಿಯ ಕ್ರಮಕೈಗೊಳ್ಳಲಾಗುವುದು, ಸ್ತ್ರೀಶಕ್ತಿ ಸಂಘಗಳಿಗೆ ಅರಿವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ನಂಗಲಿ ವ್ಯಾಪ್ತಿಯಲ್ಲಿ ಆರ್‌ಐ ಮತ್ತು ಕಾರ್ಯದರ್ಶಿ ಪಿಂಚಣಿಯ ಯಾವುದೇ ಯೋಜನೆಗೆ ಸಹಿ ಮಾಡದೆ ತೊಂದರೆ ನೀಡಲಾಗುತ್ತಿದೆ ಎಂಬ ದೂರುಗಳು ಪ್ರಮುಖವಾಗಿವೆ ಎಂದರು.

Advertisement

ದೂರು-ದುಮ್ಮಾನ: ಕಿಶೋರಿಯರಿಗೆ ಅನುಕೂಲವಾಗುವ ಸಬಲ ಯೋಜನೆಯನ್ನು ಮುಂದುವರೆಸಬೇಕು, ಎಲ್ಕೆಜಿ, ಯುಕೆಜಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು. ಚುನಾವಣೆಯಲ್ಲಿ ಕೆಲಸ ಮಾಡಿರುವ ಎಂಆರ್‌ಡಬ್ಲೂ ್ಯಗಳಿಗೆ ವೇತನ ನೀಡಬೇಕು, ಬಾಲವಿಕಾಸ ಸಮಿತಿ ಜಂಟಿ ಖಾತೆಯಲ್ಲಿ ಹಣ ಡ್ರಾ ಮಾಡಲು ಸಮಸ್ಯೆಯಾಗುತ್ತಿದ್ದು ಬಗೆಹರಿಸಬೇಕು ಎಂಬ ಒತ್ತಾಯವೂ ಕೇಳಿ ಬಂತು. ಪೋೕಕ್ಸೋ ಕಾಯಿದೆಯಡಿ ಇತ್ತೀಚೆಗೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ವಸತಿ ಶಾಲೆಗಳಲ್ಲಿ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಿಕೊಡಬೇಕು ಎಂಬ ಸಲಹೆಗಳಿವೆ ಎಂದು ಹೇಳಿದರು.

ದೇವರಾಯಸಮುದ್ರದ ವಸತಿ ಶಾಲೆಯಲ್ಲಿ ಶೌಚಾಲಯ ಕುಸಿದು ಮೃತಪಟ್ಟ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು, ವಿವಿಧೆಡೆ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವುದು ಸೇರಿದಂತೆ ಇನ್ನಿತರೆ ದೂರುಗಳನ್ನು ನೀಡಲಾಯಿತು.

ದೂರುಗಳನ್ನು ಸ್ವೀಕರಿಸಿದ ಉಪನಿರ್ದೇಶಕಿ ಎಂ.ಸೌಮ್ಯ ಕೂಡಲೇ ಇವುಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next